‘ಶಿವನ ಬುಟ್ಟಿ’ ಲೇಖಕ ಹಿರೇಮಲ್ಲೂರ ಈಶ್ವರನ್ ಅವರ ಪ್ರಬಂಧ ಸಂಕಲನ. ಇಲ್ಲಿ ಗೆಳೆತನ, ಚಟ, ಸಾವು, ಮಹತ್ವಾಕಾಂಕ್ಷೆ, ಸಿರಿವಂತಿಕೆ, ಪ್ರವಾಸ, ಸ್ತುತಿ, ಮೂಢಭಕ್ತಿ, ಸಹವಾಸ, ಮೌನ, ಸೌಂದರ್ಯ, ಪುಸ್ತಕಗಳು, ಅನುಭವ, ಮಾತು, ಅಧಿಕಾರ, ಯೌವನ, ತಾಳ್ಮೆ, ಕೀರ್ತಿ, ಮಿಥ್ಯಾಚಾರ, ಹಣ, ಪ್ರೇಮ, ಕರ್ತವ್ಯ, ಭವಿಷ್ಯತ್ತು, ಅಹಂಕಾರ, ಪ್ರಾರ್ಥನೆ ಸೇರಿದಂತೆ ಹಲವು ಪ್ರಬಂಧಗಳು ಸಂಕಲನಗೊಂಡಿವೆ.
ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್, ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ. ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. 'ಹರಿಹರ ಕವಿಯ ಕೃತಿಗಳು - ಒಂದು ಸಂಖ್ಯಾನಿರ್ಣಯ' ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್ ನಲ್ಲಿ ನೆಲೆಸಿದರು. ಮನುಸ್ಕೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ...
READ MORE