'ಕಾರಂತರು ಯಾರೇನಂತಾರೆ ಎಂಬುದನ್ನು ನೋಡಲ್ಲ. ತನಗೆ ಸರಿ, ತಪ್ಪು ಏನೇ ಅನ್ನಿಸಿದರೂ ನೇರವಾಗಿ ಹೇಳಿಬಿಡುತ್ತಾರೆ' ಎಂಬುದು ಅವರನ್ನು ಬಲ್ಲ ಪ್ರತಿಯೊಬ್ಬರೂ ಆಡುವ ಮಾತು. ಶೀರ್ನಾಳಿ ಓದಿದಾಗಲೂ ಅದು ದಟ್ಟವಾಗುತ್ತದೆ. ತೋರಿಕೆಯ ವಾಸ್ತವ ಪ್ರಜ್ಞೆಯಿಲ್ಲದೆ ಬರವಣಿಗೆಯೂ ಸಹಜ, ಸರಳ, ಸಸ್ವರೂಪ ಚಿಂತನೆಗಳೇ, ಊರು, ವ್ಯಕ್ತಿ, ವಿಷಯ, ಘಟನೆಗಳನ್ನು ನಿರೂಪಿಸಿದ್ದು ಚಿಂತನಾಶಕ್ತಿ ಹೆಚ್ಚಿಸುವ ಸಂಗತಿಗಳು ಪುಸ್ತಕಗಳಲ್ಲಿವೆ. ಶೀರ್ನಾಳಿನ ಒಂದು ಮನೆ, ಮನೆತನ ನೆನೆಯುತ್ತ ಅಲ್ಲಿನ ಸಾಧಕ ವಕೀಲರನ್ನು, ಅವರ ಕಾರ್ಯವೈಖರಿಯನ್ನು ಮೆಚ್ಚುವ ಶೈಲಿಯು ತಲೆಮಾರನ್ನು ಆಧುನಿಕತೆಗೆ ಕೊಂಡಿಯಾಗಿಸುವ ವಿಷಯಾಸಕ್ತಿಕ ಲೇಖನಗಳು ಇಲ್ಲಿವೆ.
ಪ್ರಭಾಕರ ಕಾರಂತರು ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತರಾಗಿ, ಸಹೃದಯೀ ಸಾಹಿತ್ಯ ಪ್ರೇಮಿಯಾಗಿ ಬೆಳೆದವರು. ಪಲ್ಲಟಗೊಂಡ ಬದುಕು, ಆಗಿನ ತುಮುಲಗಳು, ಜೊತೆಗೆ ಅವರ ಬಹುಮುಖಿ ಚಟುವಟಿಕೆಗಳು ಅವರ ಅನುಭವದ ಹರವನ್ನು, ಆಳವನ್ನು ಹೆಚ್ಚಿಸಿದೆ. ಹೊಸಕೊಪ್ಪದಂತ ಪುಟ್ಟ ಹಳ್ಳಿಯಲಲ್ಲಿ ಜನಿಸಿದ ಅವರು ಹಿಡಿದು ಕಗ್ಗಾಡಿನ ನಡುವಿನ ಗೀರ್ಲುವಿನ ಹಳ್ಳಿಗನೊಬ್ಬನಾಗಿ ಬಾಳಿದರು. ಎಲ್ಲರ ಬಳಿಯೂ ಯಾವುದೇ ಅಹಂಕಾರ ಅಥವಾ ಕೀಳರಿಮೆಗಳಿಲ್ಲದೇ ಒಡನಾಡಿದ್ದಾರೆ. ಅವರ ಬದುಕಿನಲ್ಲಿನ ಪ್ರಾಮಾಣಿಕತೆ, ಉತ್ತಮ ಸಾಮಾಜಿಕ ಬದುಕಿನ ಬಗ್ಗೆ ಅವರಿಗಿರುವ ತೀವ್ರ ಕಳಕಳಿ, ನಿಷ್ಠೆಗಳು ಅವರ ಬರಹಗಳಲ್ಲೂ ಸಹಜವಾಗಿ ಬಂದಿದೆ. ’ಶೀರ್ನಾಳಿ, ಬೇರು ಪ್ರೀತಿ, ವಿಮರ್ಶಕರ ಅಧ್ವಾನಗಳು’ ಅವರ ಕೃತಿಗಳು. ...
READ MORE