`ಸಂಸ್ಕೃತ ಕನ್ನಡಗಳ ಬಾಂಧವ್ಯ’ ಕೃತಿಯು ಬಿ.ಎಚ್. ಶ್ರೀಧರ ಅವರ ಪ್ರಬಂಧ ಕೃತಿಯಾಗಿದೆ. ಇಲ್ಲಿ ಸಂಸ್ಕೃತಕ್ಕೂ ಕನ್ನಡಕ್ಕೂ ಬಾಂಧವ್ಯ ಇದೆ. ದಾಯಾದಿತನ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ಪ್ರಬಂಧದಲ್ಲಿ, ಸಾಧಾರವಾಗಿ, ತಕ್ಕಮಟ್ಟಿನ ಸಾಕಲ್ಯದಿಂದ ಸಾಕಲ್ಯವು ಶಕಲಸಕಲವಾಗುವದಿಲ್ಲ. ಅದು ವಿಕ್ಕ-ಸಕ್ಕ ಅಲ್ಲ, ಅಸ್ತವ್ಯಸ್ತವಾಗದು. 'ಹರಿ-ಹರ' ಏನೇ ಅಂದಿರಲಿ, ವ್ಯಾಸರಿಗೆ ಹರಿ-ಹರ ಸಾಮರಸ್ಯ ಕಂಡಿದೆ. ಅದು ಭಾಗವತ ಭಕ್ತಿಯೋಗ, 'ವಸಿಷ್ಠ-ಪರಾಶರ-ಶಕ್ತಿ-ವ್ಯಾಸ-ಶುಕ ಈ ಪಂಚಕದ ಮೂಲಕ್ಕೆ 'ನಾರಾಯಣ ವಿಧಿ-(ಬ್ರಹ್ಮ)' ಇದ್ದಾರೆ. ಇದು ಶ್ರೀರಾಮು ಬ್ರಹ್ಮಚೈತನ್ಯ ದೃಷ್ಟಿ, 'ನಾಕು ತಂತಿ'ಯ ಕವನಗಳಲ್ಲಿ ಈ ತುರೀಯಾತೀತ ದರ್ಶನ ಇದೆ. 'ದೇವಾಸುರರ ದಾಯಾದಿತನ ಬೇರೆ, ತಂದೆ-ತಾಯಿಯರ ಕಂದನ ಆನಂದ ಗ್ರಂಥಿಯ ಮರ್ಮ ಬೇರೆ. ಮೂರನ್ನು ಒಂದಾಗಿ ಕಾಣುವದು 'ಸಂಯದು, ಇದು ತುರೀಯಾತೀತದ 'ಅಂಗುಷ್ಯ' ಮಾತ್ರವಾಗಿದೆ. ಸಂಸ್ಕೃತದಲ್ಲಿ ಆಗಮ ಮಾರ್ಗವಿದೆ. ಶೈವಾಗಮಗಳು ಸಂಸ್ಕೃತದಲ್ಲಿವೆ: ದ್ರಾವಿಡದಲ್ಲಿಲ್ಲ. ದ್ರಾವಿಡವೂ ದೇಶ್ಯವಿರಲಿಲ್ಲ, ಹೊರಗಿನಿಂದ ಬಂದದ್ದೇ, ಚೋಳ- ಚೇರ-ಪಾಂಡ್ಯ ತ್ರಿಕೂಟವು ವರಾಹ ಧ್ವಜದ ಪ್ರತಿಪಕ್ಷಿ ಎನಿಸಿ ಮತ್ತೆ ಮತ್ತೆ ಸೋತಿದೆ. ನೈಗಮಿಕಪ್ಪು ಆಗಮಿಕದಿಂದ ಗ್ರಸ್ತವಾಗುತ್ತದೆ ಅಸ್ತ್ರವಾಗುವುದಿಲ್ಲ ಎಂಬುವುದನ್ನು ಕಾಣಬಹುದಾಗಿದೆ.
©2024 Book Brahma Private Limited.