`ಸಾಹಿತ್ಯ ಸಂಪದ’ ಜಯದೇವಪ್ಪ ಜೈನಕೇರಿ ಅವರ ಪ್ರಬಂಧ ಸಂಕಲನವಾಗಿದೆ. ಅಂತರಂಗದ ಅರಳುವಿಕೆಯೇ ಜೀವನದಲ್ಲಿ ಪ್ರಧಾನವಾಗಿರಬೇಕೆಂದು ತಮ್ಮ ತುಂಬು ಜೀವನದಲ್ಲಿಗಳಿಸಿದ ಅಪಾರ ಅನುಭವದ ನೆಲೆಯಲ್ಲಿ ನಿರೂಪಿಸಿದ್ದಾರೆ. ಉನ್ನತ ವಿಚಾರಗಳಿಂದಲೂ ಉತ್ತಮ ಸಂಸ್ಕಾರದಿಂದಲೂ ಪ್ರೇರಿತವಾದ ಒಳ್ಳೆಯ ಕೆಲವು ಮಾತುಗಳನ್ನು ಕೇಳ ಬಯಸುವವರಿಗೆ ಈ ಕೃತಿ ನಿರಾಶೆಯನ್ನುಂಟುಮಾಡುವುದಿಲ್ಲ.
ಹೊಸತು - ಮಾರ್ಚ್ -2005
ಬದುಕಿಗೆ ನೇರವಾಗಿ ಸಂಬಂಧಿಸಿದ ತಾತ್ವಿಕ ಚಿಂತನೆಗಳಿಂದ ಕೂಡಿದ ಇಲ್ಲಿನ ಬರಹಗಳು ಹೆಚ್ಚು ಆತ್ಮೀಯವಾಗಿ ಓದುಗರನ್ನು ತಲುಪುತ್ತವೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕಿವಿಮಾತುಗಳು ಸತ್ಯದ ನುಡಿಗಳಂತೆಯೂ, ಓರ್ವ ಹಿರಿಯ ಹಿತೈಷಿಯ ಬುದ್ಧಿವಾದದ ಮಾತುಗಳಂತೆಯೂ ನಮ್ಮನ್ನು ಸೆಳೆಯುತ್ತವೆ. ತಮ್ಮ ವ್ಯಕ್ತಿತ್ವವನ್ನು ತಾವೇ ಶ್ರೇಷ್ಠವಾಗಿ ರೂಪಿಸಿಕೊಳ್ಳುತ್ತ ಸಾಗುವ ಮನುಷ್ಯನು ಇತರರಿಗೆ ಮಾರ್ಗದರ್ಶಕನಾಗಿರಬೇಕು. ಯಾವುದೇ ಬಾಹ್ಯ ಆಕರ್ಷಣೆಯ ವಸ್ತುಗಳ ಬಗ್ಗೆ ಅತಿಯಾದ ವ್ಯಾಮೋಹ ಸಲ್ಲದು; ಅಂತರಂಗದ ಅರಳುವಿಕೆಯೇ ಜೀವನದಲ್ಲಿ ಪ್ರಧಾನವಾಗಿರಬೇಕೆಂದು ತಮ್ಮ ತುಂಬು ಜೀವನದಲ್ಲಿ ಗಳಿಸಿದ ಅಪಾರ ಅನುಭವದ ನೆಲೆಯಲ್ಲಿ ನಿರೂಪಿಸಿದ್ದಾರೆ. ಉನ್ನತ ವಿಚಾರಗಳಿಂದಲೂ ಉತ್ತಮ ಸಂಸ್ಕಾರದಿಂದಲೂ ಪ್ರೇರಿತವಾದ ಒಳ್ಳೆಯ ಕೆಲವು ಮಾತುಗಳನ್ನು ಕೇಳ ಬಯಸುವವರಿಗೆ ಈ ಕೃತಿ ನಿರಾಶೆಯನ್ನುಂಟುಮಾಡುವುದಿಲ್ಲ.
©2024 Book Brahma Private Limited.