ಸಾಹಿತಿ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಸಮಕಾಲೀನ ನವೋದಯ ಸಾಹಿತಿಗಳನ್ನು ಅಕ್ಷರಶಃ ಆರಾಧಿಸಿ, ಅವರ ಸಾಹಿತ್ಯ ಕೃಷಿಯನ್ನು ಅಪಾರವಾಗಿ ಮೆಚ್ಚಿದವರಾಗಿದ್ದರು.
ಡಿ.ವಿ.ಜಿ, ಮಾಸ್ತಿ, ಬೇಂದ್ರೆ, ದೇವುಡು, ರಾಜರತ್ನಂ, ವಿ.ಸೀತಾರಾಮಯ್ಯ ಮೊದಲಾದ ಮಹನೀಯರ ಕೆಲವು ವ್ಯಕ್ತಿಚಿತ್ರಗಳು ಸಾಹಿತಿಗಳ ಸ್ಮೃತಿ ಕೃತಿಯಲ್ಲಿವೆ. ಸಾಧ್ಯವಿದ್ದಷ್ಟೂ ಸಾಹಿತಿಗಳ ಮಾತನ್ನೇ ನೆನಪಿಟ್ಟಪುಕೊಂಡು ಅವುಗಳ ಮೂಲಕವಾಗಿ ಇಡೀ ವ್ಯಕ್ತಿತ್ವದ ಪುನರ್ ನಿರ್ಮಾಣ ಮಾಡಿರುವುದರಿಂದ ಈ ಚಿತ್ರಗಳಿಗೆ ಜೀವಂತಿಕೆ ಬಂದಿದೆ ಎನ್ನಬಹುದು.
ಸರಳ ಹಾಗೂ ಸಾದಾ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರಾಗಿದ್ದವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಸದಾ ತನ್ನ ಸುತ್ತಲಿನ ಪರಿಸರದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದರು. ಅವರು ಬರೆದದ್ದು ಇರಬೇಕಾದ ಆದರ್ಶದ ಬದುಕನ್ನಲ್ಲ, ಬದುಕೇ ಆದರ್ಶವಾಗುವ ಬಗೆಯನ್ನು. ಅವರ ಬರಣಿಗೆಯಲ್ಲಿ ಸಂಕೇತಗಳು, ಪ್ರತಿಮೆಗಳಾಗಿ, ಪ್ರತಿಮೆಗಳು ಸಂಕೇತಗಳಾಗಿ, ಕೆಲವೊಮ್ಮೆ ಎರಡನ್ನೂ ಮೀರಿದ ಶಕ್ತಿಯಾಗುವುದನ್ನು ಜೀವಾಕ್ಷರವಾಗುವುದನ್ನು ಕಾಣುತ್ತೇವೆ. ಗಾಂಧೀ, ವಿನೋಬಾ, ರಮಣ ಮಹರ್ಷಿ, ಪರಮಹಂಸ, ಜೆ.ಕೆ.ಮುಂತಾದವರಿಂದ ಪ್ರಭಾವಿತರಾಗಿದ್ದ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಳ್ಳಿಯೊಂದರಲ್ಲಿ ತಮ್ಮಷ್ಟಕ್ಕೆ ತಾವೇ ಸಮಾಜಸೇವೆ ಮಾಡಿಕೊಂಡಿದ್ದರು. ಯೇಗ್ದಾಗೆಲ್ಲಾ ಐತೆ(ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪು), ತುಂಬಿ (ಕವನ ಸಂಕಲನ), ...
READ MORE