‘ಪ್ರವಾಸಿಯ ಪ್ರಬಂಧಗಳು’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪ್ರವಾಸಾನುಭವ ಆಧಾರಿತ ಲಲಿತ ಪ್ರಬಂಧಗಳಾಗಿವೆ. 23 ಪ್ರಬಂಧಗಳನ್ನು ಒಳಗೊಂಡಿರುವಂತಹ ಈ ಕೃತಿಯು ಹಾಸ್ಯಪ್ರಬಂಧಗಳಿಂದ ಪ್ರಾರಂಭಿಸಿ ವಿಚಾರ ಮಂಥನದತ್ತ ಎಳೆದೊಯ್ಯುವ ಪಯತ್ನವನ್ನು ಮಾಡಿದೆ. ಇಲ್ಲಿನ ಪ್ರತಿಯೊಂದು ಪ್ರಬಂಧಗಳು ಕಳೆದ ಮೂರು ದಶಕಗಳಲ್ಲಿ ಕರ್ಮವೀರ, ಕಸ್ತೂರಿ, ಪ್ರಜಾವಾಣಿ, ಸುಧಾ, ಮಯೂರ, ಮಲ್ಲಿಗೆ, ಉದಯವಾಣಿ, ತರಂಗ, ತುಷಾರ ಮೊದಲಾದ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಈ ಪ್ರಬಂಧಗಳ ಕಾಲಾವಧಿಯಲ್ಲಿ ಅನೇಕ ಬದಲಾವಣೆಗಳಿವೆ. ಆದರೆ, ಬರೆದ ಕಾಲದ ಸ್ಥಿತಿಗತಿಗಳನ್ನು ಅವು ಬಿಂಬಿಸುತ್ತವೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.