ಡಾ. ನಾಗಪ್ಪ ಟಿ. ಗೋಗಿ ಅವರ ಸಂಪಾದನಾ ಕೃತಿ-ಪ್ರಬಂಧ ಸಂಗ್ರಹ. ಕುವೆಂಪು, ಎ.ಎನ್. ಮೂರ್ತಿರಾವ್, ಶ್ರೀರಂಗ, ವೀರೇಂದ್ರ ಸಿಂಪಿ, ಹಂಪ ನಾಗರಾಜಯ್ಯ, ಗುರುದೇವಿ ಹುಲೆಪ್ಪನವರ, ಸಿದ್ಧಲಿಂಗಯ್ಯ, ರಂಜಾನ್ ದರ್ಗಾ ಹೀಗೆ ಒಟ್ಟು 11 ಲೇಖಕರ ಪ್ರಬಂಧಗಳನ್ನು ಆಯ್ದು ಸಂಗ್ರಹಿಸಿದ ಕೃತಿ ಇದು. ಗುಲಬರ್ಗಾ ವಿ.ವಿ. ಬಿಬಿಎಂ ಮೂರನೇ ಸೆಮಿಸ್ಟರ್ ಗೆ ಈ ಪುಸ್ತಕವನ್ನು ಪಠ್ಯವನ್ನಾಗಿಸಿತ್ತು. ಈ ಪ್ರಬಂಧಗಳು ಬದುಕಿನ ನಾನಾ ಮುಖಗಳನ್ನು ದರ್ಶಿಸುತ್ತವೆ. ಪ್ರಬಂಧಗಳು ಹೇಗಿರಬೇಕು ಎಂಬುದಕ್ಕೆ ಇವು ಮಾದರಿಗಳೂ ಆಗಿವೆ.
ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಯಂಕಮ್ಮ. ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ಅಣ್ಣನ ಆಸರೆಯಲ್ಲಿ ಬೆಳೆದರು. ಸೋದರಮಾವನ ನೆರವಿನಿಂದ ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಗೋಗಿಯಲ್ಲಿ ಪ್ರೌಢಶಿಕ್ಷಣದಿಂದ ಪದವಿ ಶಿಕ್ಷಣ ಪೂರೈಸಿದರು. ಗುಲಬರ್ಗಾ ವಿವಿಯಿಂದ ಎಂ.ಎ. ಶಿಕ್ಷಣ ಪಡೆದರು. ಲಿಂಗಣ್ಣ ಸತ್ಯಂಪೇಟೆ ಜೀವನ ಕುರಿತು ಎಂ.ಫಿಲ್ ಹಾಗೂ ಅಂಬಿಗರ ಚೌಡಯ್ಯ ಜೀವನ ಹಾಗೂ ವಚನ ಸಾಹಿತ್ಯ ಕುರಿತು ಪಿಎಚ್ ಡಿ ಪೂರೈಸಿದರು. ಸುರಪುರ ತಾಲೂಕಿನ ಕೆಂಭಾವಿ ಹಾಗೂ ಬೀದರ ಜಿಲ್ಲೆಯ ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ...
READ MORE