ಬೆಳವಾಡಿ ಮಂಜುನಾಥ ಅವರ ಕೃತಿ ಪ್ರಬಂಧ ಸ್ವರೂಪ. ಈ ಕೃತಿಯಲ್ಲಿ ಕೆ.ಓಂಕಾರಪ್ಪ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಈ ಕೃತಿಯಲ್ಲಿ ಇಪ್ಪತ್ತ ನಾಲ್ಕು ಪ್ರಬಂಧಗಳಿವೆ. ಈ ಎಲ್ಲ ಪ್ರಬಂಧಗಳೂ ಒಂದೇ ಸ್ತರದವಲ್ಲ. ಆದರೆ ವಸ್ತು ವೈವಿದ್ಯ, ವಿಚಾರ ಸಮೃದ್ಧಿಇಲ್ಲಿಯ ಪ್ರಬಂಧದ ಅತಿಶಯತೆ. ಒಂದೆರಡು ಪ್ರಬಂಧಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಪ್ರಬಂಧಗಳಲ್ಲಿ ಸಾಹಿತ್ಯ ಬಹುಮುಖ್ಯವಗಿ ಒಳಗೊಳ್ಳಬಾಕಾದ ಸಮಕಾಲೀನತೆಯ ಆಶಯ ನಿಚ್ಚಳವಾಗಿ ಬಿತ್ತರಗೊಂಡಿದೆ ಎಂದಿದ್ದಾರೆ.
ಡಾ. ಬೆಳವಾಡಿ ಮಂಜುನಾಥ ಅವರು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯಲ್ಲಿ ಜನಿಸಿದರು ಪ್ರಾಥಮಿಕ ವಿದ್ಯಾಭ್ಯಾಸ ಬೆಳವಾಡಿ ಸರ್ಕಾರಿ ಶಾಲೆ.ಪ್ರೌಢ ಶಿಕ್ಷಣ ಕಳಸಾಪುರ ವಿನಾಯಕ ಪ್ರೌಢಶಾಲೆ.ಚಿಕ್ಕಮಗಳೂರು ಐ.ಡಿ.ಎಸ್. ಜಿ ಸರ್ಕಾರಿ ಕಾಲೇಜಿನಿಂದ ಬಿ.ಎ ಪದವಿ. ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ. ಎ ಪ್ರಥಮ ಶ್ರೇಣಿಯೊಂದಿಗೆ ಚಿನ್ನದ ಪದಕ.ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಕುವೆಂಪು ವಿಶ್ವ ವಿದ್ಯಾನಿಲಯದಿಂದ ಬಿ.ಇಡಿ ಪದವಿ. ಧಾರವಾಡ ದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಎಚ್ ಡಿ.ಪದವಿ. ಚನ್ನರಾಯ ಪಟ್ಟಣ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿದರು. . ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸರ್ಕಾರಿ ಪದವಿ ಪೂರ್ವ ...
READ MORE