ಲೇಖಕ ಬಿ. ಎಚ್. ಶ್ರೀಧರ ಅವರ ಪ್ರಬಂಧ ಸಂಕಲನ ಕೃತಿ ʼಪಂಚಮುಖಿʼ. ಲೇಖಕ ರಾಜಶೇಖರ ಹೆಬ್ಬಾರ ಅವರು ಪುಸ್ತಕದ ಸಂಪಾದಕರ ನುಡಿಯಲ್ಲಿ, “ಪಂಚಮುಖಿ' ಹೆಸರೇ ಹೇಳುವಂತೆ, ಇದು ಐದು ವೈಚಾರಿಕ ಪ್ರಬಂಧಗಳ ಸಂಕಲನ. ಕನ್ನಡದ ಜೀವನಸೂತ್ರ, ಸಾಹಿತ್ಯದ ಸಿದ್ದಿ, ವಿಶ್ವಶಾಂತಿ, ರಾಷ್ಟ್ರೀಯ ಪುನರುಜ್ಜೀವನ ಮತ್ತು ಸಾಹಿತ್ಯದ ಪಾಧಾನ್ಯ ಎಂಬ ಪ್ರಬಂಧಗಳನ್ನು ಇದು ಒಳಗೊಂಡಿದೆ. ಎಲ್ಲ ಪ್ರಬಂಧಗಳೂ ಶ್ರೀಧರಸಾಹಿತ್ಯದ ಸ್ಥಾಯಿಭಾವವಾದ ನೈತಿಕ ನಿಲುವನ್ನು ಧ್ವನಿಸುತ್ತವೆ. ಜನ ಶಿಕ್ಷಣದ ಧ್ಯೇಯವನ್ನು ಹೊತ್ತಿದ್ದ ಶ್ರೀಧರರ ಎಲ್ಲ ಕೃತಿಗಳ ಹಿಂದೆಯೂ ಜನ-ಮನ ಸಂಸ್ಕಾರದ ಕಳಕಳಿ ಇದ್ದೇ ಇದೆ. ಪಂಚಮುಖಿಯ ಶೈಲಿ, ಭಾಷೆಯ ಸರಳತೆ, ಸುಭಗತೆ ಶ್ರೀಧರಗದ್ಯ ಗಡಚು ಎನ್ನುವ ಆಕ್ಷೇಪಕ್ಕೆ ಉತ್ತರದಂತಿದೆ” ಎಂದು ಹೇಳಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಕನ್ನಡದ ಜೀವನ ಸೂತ್ರ, ಸಾಹಿತ್ಯದ ಸಿದ್ದಿ, ವಿಶ್ವಶಾಂತಿ, ರಾಷೀಯ ಪುನರುಜ್ಜೀವನ, ಹಾಗೂ ಸಾಹಿತ್ಯದ ಪ್ರಾಧಾನ್ಯ ಸೇರಿ ಒಟ್ಟು ೫ ಶೀರ್ಷೆಕೆಗಳಲ್ಲಿ ಪ್ರಬಂಧಗಳಿವೆ.
©2024 Book Brahma Private Limited.