ಒಂದು ತಲೆ ಚವುರದ ಕಥೆ

Author : ಶಿವರಾಜ ಬ್ಯಾಡರಹಳ್ಳಿ



Year of Publication: 2024
Published by: ಕಿರಂ ಪ್ರಕಾಶನ
Address: ಬೆಂಗಳೂರು
Phone: 7090180999

Synopsys

’ಒಂದು ತಲೆ ಚವುರದ ಕಥೆ’ ಕೃತಿಯು ಶಿವರಾಜ್ ಬ್ಯಾಡರಹಳ್ಳಿ ಅವರ ಪ್ರಬಂಧಗಳ ಸಂಕಲನವಾಗಿದೆ. ಈ ಕೃತಿ ಕುರಿತಂತೆ ವಿಮರ್ಶಕ ರಘುನಾಥ್ ಚ.ಹ ಹೀಗೆ ಹೇಳುತ್ತಾರೆ; ದಲಿತ ಸಂವೇದನೆಯ ಕಸಿಯ ರೂಪದಲ್ಲಿ ಗಮನಿಸಬಹುದಾದ ಶಿವರಾಜ್‌ರ ಪ್ರಬಂಧಗಳಲ್ಲಿನ ದಲಿತಪ್ರಜ್ಞೆಯನ್ನು ಎರಡು ಆಯಾಮಗಳಲ್ಲಿ ಗುರ್ತಿಸಬಹುದು. ಸಮೃದ್ಧ ವಿವರಗಳ ಮೂಲಕ ಕಾಣಿಸಿಕೊಂಡಿರುವ ದಲಿತಪ್ರಜ್ಞೆ, ಓದುಗರಿಗೆ ದಲಿತರ ಬದುಕಿನ ಪರಿಸರವನ್ನು ಅದರೆಲ್ಲ ಚೆಲುವು ಸಂಕಟಗಳೊಂದಿಗೆ ಕಟ್ಟಿಕೊಡುವ ಪ್ರಯತ್ನ ನಡೆಸುತ್ತದೆ. ಸಮಾಜದಲ್ಲಿ ಹಾಸುಹೊಕ್ಕಾಗಿರುವ ಭಿನ್ನಭೇದಗಳ ಬಗ್ಗೆ ಸಹೃದಯರ ಗಮನಸೆಳೆಯುವುದು ಹಾಗೂ ಸಾಮಾಜಿಕ ತರತಮಗಳ ಕುರಿತು ಚರ್ಚೆಗೆ ಪ್ರೇರೇಪಿಸುವುದು ಇಲ್ಲಿನ ಪ್ರಬಂಧಗಳಲ್ಲಿನ ದಲಿತಪ್ರಜ್ಞೆಯ ಮತ್ತೊಂದು ಲಕ್ಷಣವಾಗಿದೆ.

`ಹಾವು ಹೊಡೆಯುವುದು ಎಂದರೆ' ಹಾಗೂ `ಇಲಿ ಬೇಟೆ' ರಚನೆಗಳನ್ನು ಪ್ರಬಂಧಕಾರರಾಗಿ ಶಿವರಾಜ ಬ್ಯಾಡರಹಳ್ಳಿ ಅವರ ಸಾಧ್ಯತೆಗಳಿಗೆ ಉದಾಹರಣೆಯಾಗಿ ಗಮನಿಸಬಹುದು. ಸಂಕಲನದ ಮುಖ್ಯ ರಚನೆಗಳೂ ಆದ ಈ ಎರಡೂ ಪ್ರಬಂಧಗಳು ಬೇಟೆಗೆ ಸಂಬಂಧಿಸಿದವುಗಳೇ ಆಗಿವೆ ಹಾಗೂ ತಮ್ಮ ಕೇಂದ್ರದಲ್ಲಿ ದಲಿತಪ್ರಜ್ಞೆಯನ್ನು ಒಳಗೊಂಡಿವೆ. ಮೊದಲ ಪ್ರಬಂಧದಲ್ಲಿ ದಾರಿ ತಪ್ಪಿ ಮನೆಗೆ ಬರುವ ಹಾವು ಬೇಟೆಗೆ ಗುರಿಯಾದರೆ, ಎರಡನೇ ಪ್ರಬಂಧದಲ್ಲಿ ಮನುಷ್ಯನೇ ಇಲಿಗಳ ಬಿಲಗಳನ್ನು ಹುಡುಕಿ ಬೇಟೆಯಾಡುತ್ತಾನೆ. ಮೊದಲ ಬೇಟೆಯಲ್ಲಿ ಭೀತಿ ನಿವಾರಣೆಗೊಂಡರೆ, ಎರಡನೆಯದರಲ್ಲಿ ಹಸಿವು ನಿವಾರಣೆಗೊಳ್ಳುವುದು. `ದಾರಿ ತಪ್ಪಿ ಮನೆಗಳಿಗೆ ಬರುವ ಹಾವಿನಿಂದ ಉಂಟಾಗುವ ಭೀತಿ, ಹಾವನ್ನು ಕೊಲ್ಲಲು ನಡೆಯುವ ಪ್ರಯತ್ನಗಳು, ಆ ಪ್ರಯತ್ನಗಳು ಉಂಟು ಮಾಡುವ ಕುತೂಹಲ - ಹೀಗೆ ಹಲವು ಸ್ವಾರಸ್ಯಕರ ಪ್ರಸಂಗಗಳನ್ನು `ಹಾವು ಹೊಡೆಯುವುದು ಎಂದರೆ' ಪ್ರಬಂಧದಲ್ಲಿ ಶಿವರಾಜ್ ಕಲೆಹಾಕಿದ್ದಾರೆ. ಇಲ್ಲಿನ ವಿವರಗಳು ಮಾಹಿತಿಗಳ ಕ್ರೋಡೀಕರಣವಷ್ಟೇ ಆಗಿಲ್ಲ. ಪ್ರಸಂಗಗಳ ನಿರೂಪಣೆಯ ಮೂಲಕ ಪ್ರಾಕೃತಿಕ ಸತ್ಯವೊಂದನ್ನು ನೆನಪಿಸುವುದು ಪ್ರಬಂಧಕಾರರ ಉದ್ದೇಶವಾಗಿದೆ.

ಹಾವನ್ನು ಹೊಡೆದು ಎಸೆಯುವುದು, ಸತ್ತ ಹಾವನ್ನು ಹದ್ದು ತಿನ್ನುವುದು, ಕೆಲವು ದೇಶಗಳಲ್ಲಿ ಹಾವು ಆಹಾರಪದಾರ್ಥವಾಗಿರುವುದು - ಹೀಗೆ ಆಹಾರ ಸರಪಣಿಯೊಂದನ್ನು ಪ್ರಬಂಧಕಾರರು ಗುರ್ತಿಸುತ್ತಾರೆ. ಪ್ರಕೃತಿಯಲ್ಲಿನ ಆಹಾರ ಸರಪಣಿಯನ್ನು ಗುರ್ತಿಸುವ ಮೂಲಕ, ಜಾತೀಯ ತರತಮಗಳಿಗೆ ಆಹಾರ ಸಂಸ್ಕೃತಿಯೂ ಕಾರಣಗಳಲ್ಲೊಂದಾಗಿರುವ ವಿಪರ್ಯಾಸವನ್ನು ಪ್ರಬಂಧ ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತದೆ. ಭೀತಿಯನ್ನು ಹುಟ್ಟಿಸುವ ಹಾವನ್ನು ಬುಟ್ಟಿಯಲ್ಲಿಟ್ಟುಕೊಂಡು ಹೊಟ್ಟೆ ಹೊರೆಯುವ ಸಮುದಾಯವನ್ನು ಪ್ರಸ್ತಾಪಿಸುತ್ತ, ಬದುಕಿನ ವೈವಿಧ್ಯ ಮತ್ತು ವೈರುಧ್ಯವನ್ನು ಪ್ರಬಂಧ ಗುರ್ತಿಸುತ್ತದೆ.

About the Author

ಶಿವರಾಜ ಬ್ಯಾಡರಹಳ್ಳಿ

ಲೇಖಕ ಶಿವರಾಜ ಬ್ಯಾಡರಹಳ್ಳಿ ಅವರು ಬೆಂಗಳೂರು ವಿ.ವಿ. ಯಿಂದ ಸ್ನಾತಕೋತ್ತರ ಪದವೀಧರರು. ‘ಉಜ್ಜನಿ ಚೌಡಮ್ಮ ಒಂದು ಜಾನಪದೀಯ ಅಧ್ಯಯನ’ ವಿಷಯವಾಗಿ ಬೆಂಗಳೂರು ವಿ.ವಿ.ಗೆ ಸಲ್ಲಿಸಿದ ಪಿಎಚ್.ಡಿ ಪ್ರಬಂಧ. ಸದ್ಯ ಬೆಂಗಳೂರಿನ ಆಕ್ಸ್ ಫರ್ಡ್ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.  ಕೃತಿಗಳು: ಗುಡಿಸಿಲೊಳಗೊಂದು ಬೆಳ್ಳಿ ಚುಕ್ಕಿ(ಕವನ ಸಂಕಲನ), ಉಜ್ಜನಿ ಚೌಡಮ್ಮ ಒಂದು ಜಾನಪದೀಯ ಅಧ್ಯಯನ(ಪ್ರೌಢ ಪ್ರಬಂಧ), ಪರಿಶೋಧ(ಸಾಹಿತ್ಯ ವಿಮರ್ಶೆ), ಜೇನು ಮನೆಕಲ್ಲು(ಮಕ್ಕಳ ಕಥೆಗಳು), ವಚನ ಪಲ್ಲವಿ(ಸಾಹಿತ್ಯ ವಿಮರ್ಶೆ), ಚಮ್ಮಾವುಗೆಯ ಕಿಡಿಗಳು(ಕವನ ಸಂಕಲನ), ಇಳಿಲ ಬೇರು (ಸಾಹಿತ್ಯ ವಿಮರ್ಶೆ), ಮಣ್ಣಿನ ಮಿಡಿತ (ಕಥಾಸಂಕಲನ) ಸಂಪಾದಿತ: ಕಥಾಮಂಟಪ (ಜನಪದ ಕಥೆಗಳು), ಪಚ್ಚೆ ಗಿಳಿ ಮತ್ತು ...

READ MORE

Related Books