ನುಗ್ಗಿ ಬರುವ ನೆನಪುಗಳು ಸಿದ್ದರಾಮ ಅವರ ಲಲಿತ ಪ್ರಬಂಧಗಳ ಸಂಗ್ರಹವಾಗಿದೆ. ವಿಷಯ ವೈವಿಧ್ಯತೆಯಿಂದ ಕೂಡಿದ ಈ ಪ್ರಬಂಧಗಳು ಸರಳವಾಗಿ ಓದುಗರನ್ನು ಓದಿಸಿಕೊಂಡು ಹೋಗುತ್ತವೆ. ಈ ಕೃತಿಯು ಹೈದ್ರಾಬಾದ ಕರ್ನಾಟಕ ಭಾಗದ ಬದುಕು ಮತ್ತು ಬವಣೆ, ಅಲ್ಲಿ ಬಿಸಿಲು, ಮಳಿ-ಚಳಿ ಹೀಗೆ ಗ್ರಾಮೀಣ ಬದುಕಿನ ಚಿತ್ರಣ ನೀಡುವ ಲಲಿತ ಪ್ರಬಂಧಗಳ ಸಂಕಲನವಾಗಿದ್ಧು ಕಲಬುರ್ಗಿ ಮತ್ತು ಯಾದಗಿರಿ ಭಾಷೆಯ ಸೊಗಡಿನಿಂದ ಕೂಡಿದ ಕೃತಿಯಾಗಿದೆ.
ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು. ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...
READ MORE