ಸ್ತ್ರೀವಾದಿ ಆಶಯಗಳನ್ನು ಮೂಲಕ ಗುರುತಿಸಿಕೊಂಡವರು ಹೆಚ್.ಆರ್.ಸುಜಾತಾ. ಮಹಿಳೆಯರ ಸಮಸ್ಯಗಳನ್ನು ಮುಖ್ಯವಾಹಿನಿಗೆ ತಂದು ಚರ್ಚೆಗೆ ಹೊಸ ಆಯಾಮ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಇವರ ಬಹುತೇಕ ಬರಹಗಳು ಸ್ತ್ರೀವಾದದ ಕರಪತ್ರಗಳಂತೆಯೇ ಕಾಣುತ್ತವೆ . “ಯಾವಾಗೂ ಮೂಗದಾರನೇ ಕಾಣ್ಣಿರೊ ಕುರುಬೋಳಿ ಇಂದು ದಾರದ ಒಡವೆ ಧರಿಸಿಕೊಂಡೇಟ್ಟೆ, ಈ ಮನುಷ ಮಾಡೊ ಹುನ್ನಾರದ ವಾಸನೆ ತಿಳದೋಯ್ತು , ಅಂಬಾ... ಅಂಬಾ... ಅಂತ ಕೊಟ್ಟಿಗೆ ಕಿತ್ತೋಗ ಹಂಗೆ ಕಿರಚಿಕೊಳ್ಳೋಕೆ ಅನುವಾಯ್ತು..' ಎನ್ನುವ ಸಾಲುಗಳು ಕಾಡುತ್ತವೆ. ಸುಳ್ಳಕ್ಕಿ, ದೊಡ್ಡ, ಶಿವಮ್ಮ ಮತ್ತಿತರ ಪಾತ್ರಗಳು ಮತ್ತು ಹಳ್ಳಿ ಚಿತ್ರಗಳು ಮನದಲ್ಲಿ ಉಳಿಯುವಂತಿದೆ.
ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿ ಸುಜಾತರ ಹುಟ್ಟೂರು. ಓದಿದ್ದು ಬಿಎಸ್ಸಿ, ಆದರೆ ಆಸಕ್ತಿ ಮಾತ್ರ ಅಪ್ಪಟ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ. ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ ಅನುಭವ, ಮಲೆನಾಡ ಬದುಕಿನ ಗಾಢ ಅನುಭವಗಳೇ ಬರಹಕ್ಕೆ ಸ್ಪೂರ್ತಿ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಅಂಕಣಬರಹಗಳ ಆಯ್ದ ಸಂಗ್ರಹ, ‘ನೀಲಿ ಮೂಗಿನ ನತ್ತು’ ಸುಜಾತ ಅವರ ಚೊಚ್ಚಲ ಕೃತಿ. ಮೊದಲ ಕೃತಿಗೆ ಅಮ್ಮ ಪ್ರಶಸ್ತಿ ಪುರಸ್ಕೃತರು. ಮಂಗಳೂರು ವಿವಿ ಪಠ್ಯಪುಸ್ತಕದಲ್ಲೂ ಸೇರ್ಪಡೆ. ...
READ MOREಲೇಖಕರ ಮೊದಲ ಸ್ವತಂತ್ರ ಕೃತಿ-2017