ನಾಸ್ತಿಕನು ಮತ್ತು ದೇವರು

Author : ಗೌರೀಶ ಕಾಯ್ಕಿಣಿ

Pages 120

₹ 16.00




Year of Publication: 1989
Published by: ಕಾಲಗತಿ ಪ್ರಕಾಶನ
Address: ರಾಯಬಾಗ, ಬೆಳಗಾವಿ ಜಿಲ್ಲೆ- 591317

Synopsys

‘ನಾಸ್ತಿಕನು ಮತ್ತು ದೇವರು’ ಗೌರೀಶ ಕಾಯ್ಕಣಿ ಅವರ ಪ್ರಬಂಧ ಸಂಕಲನ. ಪುಸ್ತಕದ ಕುರಿತು ಬರೆಯುತ್ತಾ ಈ ಪುಸ್ತಕವು ದೇವರ ಪ್ರಮೇಯಕ್ಕೆ ನಾಸ್ತಿಕನ ಉತ್ತರವಲ್ಲ. ಈ ಪ್ರಶ್ನೆಗೆ ನಾಸ್ತಿಕನ ನಿಲುಮೆಯಿಂದ ಒಂದು ನಿರ್ವಚನವಿದು. ಅದಷ್ಟೂ ಸರಳ ಸುಬೋಧ ಸರಣಿಯಲ್ಲಿ ಮಾಡಲು ಹೊರಟ ಒಂದು ಸಾಹಸ. ಈ ದಾರಿಯಲ್ಲಿ ಮುಂದೆ ಹೋಗುವವರಿಗೆ, ಆ ದೂರ ತೀರಕ್ಕೆ ಸಾಗುವವರಿಗೆ ಇದೊಂದು ಸಣ್ಣ ಬುತ್ತಿ ಎಂದಿದ್ದಾರೆ ಗೌರೀಶ ಕಾಯ್ಕಿಣಿ.

ಇಲ್ಲಿ ಎರಡು ಭಾಗಗಳಲ್ಲಿ ಪ್ರಬಂಧಗಳು ಸಂಕಲನಗೊಂಡಿದ್ದು, ಮೊದಲ ಭಾಗದಲ್ಲಿ ನಾಸ್ತಿಕನು ಮತ್ತು ದೇವರು, ನಾಸ್ತಿಕರಲ್ಲಿ ನಾನಾ ಪ್ರಕಾರ, ಆಸ್ತಿಕ-ಅನಾಸ್ತಿಕ, ಆಸ್ತಿಕರ ನಿಲುಮೆ, ಕೆಲವು ವೈಜ್ಞಾನಿಕರ ಆಸ್ತಿಕ್ಯ, ನಾಸ್ತಿಕನು ಯಾರು, ಕಂಡವರಿಗಲ್ಲ ಕಂಡವರಿಗಷ್ಟೇ, ಅಜ್ಞಾತ ಮೂಲ್ಯ, ದೇವರು ಒಂದು ರೂಪಕ ಸಂಕೇತ, ಪೂಜೆಯ ಸಮರ್ಥನೆ, ಕಸ್ಮೈ ದೇವಾಯ, ನಾಸ್ತಿಕನ ಐತಿಹಾಸಿಕ ಪ್ರಜ್ಞೆ, ಮಾನವನ ಉತ್ಕ್ರಾಂತಿಯಲ್ಲಿ ದೇವರ ಕಲ್ಪನೆ, ದೇವತಾ ಕಲ್ಪನೆ, ವಿಶ್ವಶಕ್ತಿ ವ್ಯಕ್ತಿ ವಿಶೇಷವಲ್ಲ, ದೇವರ ಉಭಯ ಸಂಕಟ, ದೇವ ಶಬ್ದದ ಮೂಲ, ಸಂಕರ್ಷಣಕ್ಕೆ ಉಪಾಸನೆ ಏಕೆ, ದೇವಲೋಕ out of date, ಆಶ್ರದ್ಧೆಯ ಹೊಸ ಭಾವಿಕತೆ ಪ್ರಬಂಧಗಳು ಸಂಕಲನಗೊಂಡಿವೆ.

ಎರಡನೇ ಭಾಗದಲ್ಲಿ ದೇವರ ಕುರಿತು ಮೂರು ದೃಷ್ಟಿ, ವಿಜ್ಞಾನಿಗಳೊಂದಿಗೆ ಒಂದು ಚರ್ಚೆ, ತತ್ + ತ್ವದ ದೃಷ್ಟಿ, ಪ್ರಗತಿಯ ಸೊನ್ನೆ, ಸತ್ವದಂತೆ ಶ್ರದ್ಧೆ- ಗಂಡು ಮಾಸ್ತಿ, ದೈವಿಕತೆಯ ಹಂತಗಳು, ಪ್ರಾಣದೇವತ್ವ(Animism) ಪ್ರಾಣಿದೇವತ್ವ (Totemism), ಪ್ರತೀಕ ದೇವತ್ವ (Fetishim), ಆದರ್ಶವಾದ; ಸಚ್ಛಿದಾನಂದ, ತ್ರಿವಿಧ ದಾಸೋಹ, ಮೂಲ್ಯಗಳ ಮೊತ್ತ, ಕಾರ್ಯ-ಕಾರಣ ಸರಪಳಿ, ಪೂರ್ಣತ್ವ-ಅವ್ಯಕ್ತಿ-ಅದ್ಭುತ-ಆಕಸ್ಮಿಕ, ಪೂಜಾ-ಸ್ತೋತ್ರಪ್ರಿಯ ದೇವತ್ವ, ಬದುಕು-ಪ್ರಚಂಡ ಆಕಸ್ಮಿಕ, ದೈವ-ಪುರುಷ- ಪ್ರಯತ್ನದಳ ಮೂಲ, ಒಂಟೋಲೋಜಿಯ ನಿಲುಮೆ ಆರ್ತರ ಅಗತ್ಯ, ಭಾವನಿಕ ಅವಶ್ಯಕತೆ, ಕಾಮ-ಪ್ರೇಮ-ಮಧುರಾ ಭಕ್ತಿ, ಅಚಿಂತ್ಯವು ಅನೂಹ್ಯ ಅನುಭಾವ, ನಕಾರಾತ್ಮಕ ನಡತೆ-ಈ ದಿವ್ಯಾನುಭವ, ಸಾಮಾಜಿಕ ಸತ್ತೆಗಾಗಿ ದೇವರು, ದೇವ-ಧರ್ಮಗಳ ಐತಿಹಾಸಿಕ ಕಾರ್ಯ, ಧರ್ಮದಲ್ಲಿ ದೇವ ಪ್ರತಿಷ್ಠೆ ಹಾಗೂ ಉತ್ತರ ಪಂಚಕ ಎಂಬ ನಲವತ್ತೇಳು ಪ್ರಬಂಧಗಳು ಸಂಕಲನಗೊಂಡಿವೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books