ಲೇಖಕ ಚಂದ್ರಶೇಖರ ಆಲೂರು ಅವರ ಪ್ರಬಂಧಗಳ ಸಂಕಲನ’ನಾನು ಒಲಿದಂತೆ ಹಾಡುವೆ’.
ಇಲ್ಲಿರುವ ಅನೇಕ ಬರಹಗಳು ಬುದ್ದಿ ಮತ್ತು ಭಾವನೆಗಳ ಪರಸ್ಪರ ನಿಯಂತ್ರಿತವಾಗಿರುವ ರೀತಿಯನ್ನು ಪ್ರತಿನಿಧಿಸುತ್ತದೆ. ಬದುಕಿನ ಹಾಗೂ ಸಮಾಜದ ಹಲವು ವಿಷಮತೆಗಳನ್ನು ಗುರುತಿಸುವ ಪ್ರಯತ್ನವನ್ನೂ ಇಲ್ಲಿ ಮಾಡಲಾಗಿದೆ.
ಇಳಿದಂತೆ ಇರುಳ ಮಾಲೆ, ನಾನು ಒಲಿದಂತೆ ಹಾಡುವೆ, ಒಂದು ಗ್ರೀಟಿಂಗ್ ಕಾರ್ಡ್ಗಾಗಿ, ಸಾರಿ….ಏನೋ ಸೆಂಟಿಮೆಂಟ್ಸ್, ಕುಲ ಕುಲ ಕುಲವೆಂದು, ಅದೇ ಕಡೆಯ ಭೇಟಿ, ಒಂದು..ಎರಡು..ಮೂರು, ನಂದಿಯಲ್ಲೊಂದು ಚಿತ್ರೀಕರಣ, ಒಂದು ತನಿಖೆಯ ಸುತ್ತ, ಪ್ರೀತಿ ನದಿಯಂತೆ, ಯಾವ ಮೋಹನ ಮುರಳಿ ಕರೆಯಿತು, ಆತ್ಮ ಸಂಗಾತಕ್ಕೆ ನೀನುಂಟು, ದೇವಯಾನಿ ಮುಂತಾದ ಪ್ರಬಂಧಗಳಿವೆ.
ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು. ತಂದೆ ಶ್ರೀ ಎ.ಎಚ್.ಲಿಂಗಯ್ಯ, ತಾಯಿ ಶ್ರೀಮತಿ ಅಂಕಮ್ಮ. ಏಳು ಸಹೋದರಿಯರು. ತಂದೆ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರಿಂದ ರಾಜ್ಯದ ವಿವಿಧ ಕಡೆ ವಿದ್ಯಾಭ್ಯಾಸ. 1980 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. 1981 ರಿಂದ 1990 ರವರೆಗೆ 'ಲಂಕೇಶ್ ಪತ್ರಿಕೆ'ಯಲ್ಲಿ; 1994 ರಿಂದ 1996ರ ವರೆಗೆ 'ಈ ವಾರ ಕರ್ನಾಟಕ'ದಲ್ಲಿ ವರದಿ, ಸಿನಿಮಾ ಅಂಕಣ, ಪ್ರಬಂಧ, ಕಥೆ, ವಿಮರ್ಶೆ ಇತ್ಯಾದಿ ಪ್ರಕಟ. 2000 ಜುಲೈನಿಂದ 'ಹಾಯ್ ಬೆಂಗಳೂರ್!' ಪತ್ರಿಕೆಯಲ್ಲಿ ಪ್ರತಿವಾರ “ಒಲಿದಂತೆ ಹಾಡುವೆ' ಅಂಕಣ. 2000ದಲ್ಲಿ ಅಮೆರಿಕಾ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 1989