ಕೃಷ್ಣಾಚಾರ್ @ ಕಿಷ್ಕಿಂದಾ ಬಾರ್

Author : ನರಸಿಂಹಮೂರ್ತಿ ಪ್ಯಾಟಿ

Pages 94

₹ 100.00




Year of Publication: 2022
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114

Synopsys

ಲೇಖಕ ನರಸಿಂಹಮೂರ್ತಿ ಪ್ಯಾಟಿ ಅವರು ರಚಿಸಿದ ಪ್ರಬಂಧಗಳ ಸಂಕಲನ-ಕೃಷ್ಣಾಚಾರ್ @ ಕಿಷ್ಕಿಂದಾ ಬಾರ್. ಇಲ್ಲಿಯ ಬಹುತೇಕ ಪ್ರಬಂಧಗಳ ಜೀವಾಳ ಸಾಮಾಜಿಕ ವಿಡಂಬನೆಯಾಗಿದೆ. ನವಿರಾದ ಹಾಸ್ಯವೂ ಈ ಪ್ರಬಂಧಗಳಿಗೆ ಕಚಗುಳಿ ಇಟ್ಟಿದೆ. ನಮ್ಮ ಅಜ್ಞಾನ-ಮೌಢ್ಯವನ್ನು ವಿಡಂಬಿಸುವ ಇಲ್ಲಿಯ ಪ್ರಬಂಧಗಳು, ಆರೋಗ್ಯಕಾರಿ ಮನಸ್ಥಿತಿಯೊಂದಿಗೆ ಸರ್ವ ಸಮಾನತೆಯ ಮೌಲ್ಯವನ್ನು ಪ್ರತಿನಿಧಿಸುತ್ತವೆ. ಮಾತ್ರವಲ್ಲ,  ಸಾಹಿತ್ಯಕ ಪರಿಶುದ್ಧತೆಯನ್ನು ಕಾಯ್ದುಕೊಳ್ಳುತ್ತವೆ.

About the Author

ನರಸಿಂಹಮೂರ್ತಿ ಪ್ಯಾಟಿ

ಲೇಖಕ ನರಸಿಂಹಮೂರ್ತಿ ಪ್ಯಾಟಿ ಅವರು ವೃತ್ತಿಯಲ್ಲಿ ಪತ್ರಕರ್ತರು. ’ಬ್ರಾಹ್ಮಣ ಕುರುಬ’ ಅವರ ಮೊದಲ ಪ್ರಬಂಧ ಸಂಕಲನ. ಇತ್ತಿಚೆಗೆ ತಮ್ಮ ಆಸಕ್ತಿಯನ್ನು ಕೃಷಿಯತ್ತ ಹರಿಸಿದ್ದಾರೆ. ...

READ MORE

Reviews

‘ಕೃಷ್ಣಾಚಾರ್@ಕಿಷ್ಕಿಂದಾ ಬಾರ್’ ಕೃತಿಯ ವಿಮರ್ಶೆ

ಮೊದಲ ಓದು : ಕೃಷ್ಣಾಚಾರ್ ಪ್ರಸಂಗ : 

ವೃತ್ತಿಯಲ್ಲಿ ಪತ್ರಕರ್ತರಾಗಿರುವ ನರಸಿಂಹಮೂರ್ತಿ ಪ್ಯಾಟಿ ಅವರ ಎರಡನೇ ಪ್ರಬಂಧ ಸಂಕಲನ 'ಕೃಷ್ಣಾಚಾರ್ @ ಕಿಷ್ಕಂದಾ ಬಾರ್. ಇದರಲ್ಲಿ ಒಟ್ಟು ಎಂಟು ಪ್ರಬಂಧಗಳಿವೆ. ಎಲ್ಲವೂ ಚಿಕ್ಕ, ಚೊಕ್ಕ. ಕಥೆಗಳಾದರೂ ಇಲ್ಲಿನ ಹಲವು ವಿಷಯಗಳು, ಘಟನೆಗಳು ಅನೇಕರ ಅನುಭವಗಳು.

ಇವುಗಳ ನಾಯಕ ಅಥವಾ ಪ್ರಧಾನ ಪಾತ್ರದಾರಿ 'ಕೃಷ್ಣಾಚಾರ್' ಎಂಬ ಪುರೋಹಿತ. ಹಲಗೇರಿ ಹಳ್ಳಿಯ ಕೃಷ್ಣಾಚಾರ್ ಹನುಮಂತ ದೇವರ ಗುಡಿಯ ಅರ್ಚಕ. ವ್ಯಕ್ತಿತ್ವ, ಮಾತು, ಜಾಣ್ಮೆ, ನಗುವಿನ ಟಾನಿಕ್‌ನಿಂದಲೇ ಜನರಿಗೆ ಕೃಷ್ಣಾಚಾರ್ ಅಚ್ಚುಮೆಚ್ಚು. ಪುರೋಹಿತನಾಗಿದ್ದರೂ ಆ ಪಾತ್ರವೇ ವರ್ಣರಂಜಿತ. 'ರೈಟ್ ರೈಟ್ ಯಂಕಣ್ಣ, 'ಕಾಕಪಿಂಡ', 'ಭೂ ಪ್ರಹಸನ' ದಲ್ಲಿ ಎದುರಾಗುವ ಪ್ರಸಂಗ, ಅದಕ್ಕೆ ಕೃಷ್ಣಾಚಾರ್ ಅವರ ಉಪಾಯ, ಪರಿಹಾರ ಪಾತ್ರಕ್ಕೆ ಜೀವ ತುಂಬುತ್ತವೆ. ಇಲ್ಲಿ ಹಾಸ್ಯ ಶೈಲಿಯ ಬರವಣಿಗೆಯಲ್ಲಿ ಲವಲವಿಕೆಯಿದೆ. ಕಥೆಯೊಳಗೆ ಕಥೆಗಳು ಅಡಗಿವೆ. ಕೃಷ್ಣಾಚಾರ್ ಪಾತ್ರದ ಪ್ರತೀ ಮಾತಿನಲ್ಲಿ ಆಲೋಚನೆಗಳಿಗೂ ಅವಕಾಶವಿದೆ.

( ಕೃಪೆ : ಪ್ರಜಾವಾಣಿ, 2022 ಫೆ. 20)

Related Books