ಹಳತಿಗೆ ಹೊಳಪು ಮತ್ತು ಇತರ ಸಾಹಿತ್ಯ ಪ್ರಬಂಧಗಳು

Author : ಬಾಲಸುಬ್ರಹ್ಮಣ್ಯ ಕಂಜರ್ಪಣೆ

Pages 248

₹ 250.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ವಿಮರ್ಶಾತ್ಮಕ ಪ್ರಬಂಧಗಳ ಸಂಕಲನ 'ಹಳತಿಗೆ ಹೊಳಪು'. ಕೃತಿಗೆ ಮುನ್ನುಡಿ ಬರೆದಿರುವ ಪ್ರದಾನ್ ಗುರುದತ್ತ ಅವರು ‘ಕನ್ನಡದ ಹಿರಿಮೆಗೆ ತಮ್ಮದೇ ಆದ ಕಾಣಿಕೆಯನ್ನು ಸಲ್ಲಿಸಿದ್ದರೂ ಬಹುಮಟ್ಟಿಗೆ ಮರೆತುಬಿಟ್ಟಂತೆ ಆಗಿರುವ ಹಲವು ಮಹತ್ವದ ಸಾಹಿತಿಗಳ ಸಾಧನೆಯನ್ನು ಮತ್ತೆ ನೆನಪಿಸಿಕೊಡುವ ಪ್ರಯತ್ನವನ್ನು ಮಾಡಿರುವುದರಿಂದ ಈ ಸಂಕಲನಕ್ಕೆ ಇದು ಅರ್ಥಪೂರ್ಣವಾಗಿರುವ ಶೀರ್ಷಿಕೆಯೂ ಆಗಿದೆ. ಕನ್ನಡದ ಹಿರಿಮೆ ಗರಿಮಗಳಿಗೆ ಪ್ರತಿಯೊಂದು ಪ್ರದೇಶವೂ ಹೇಗೆ ತನ್ನ ಕೊಡುಗೆಯನ್ನು ನೀಡುತ್ತ ಬಂದಿದೆ ಎಂಬುದೂ ಇದರಿಂದ ನಿಚ್ಚಳವಾಗುತ್ತದೆ..! - ಒಟ್ಟಿನಲ್ಲಿ, ಇಲ್ಲಿನ 40 ಲೇಖನಗಳು ಕಂಜರ್ಪಣೆ ಅವರ ಅಧ್ಯಯನದ ವಿಶಾಲ ವ್ಯಾಪ್ತಿಯನ್ನು, ಗುಣಗ್ರಾಹಿಕತೆಯನ್ನು ಅರ್ಥ ಮಹತ್ವಗಳನ್ನು ಪಂಥಾತೀತವಾಗಿ ಗ್ರಹಿಸುವ ಔಚಿತ್ಯಪ್ರಜ್ಞೆಯನ್ನು ಮುಕ್ತಮನಸ್ಸಿನ ಆಲೋಚನೆ-ಚಿಂತನೆಗಳನ್ನು ಹಳತನ್ನು ಮರೆಯದೆ/ಮರೆಯಲುಗೊಡದಿರುವ ರಸಜ್ಞ ಮನೋಧರ್ಮವನ್ನು ಬಿಂಬಿಸುತ್ತವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಓಧು ಮರು - ಓದು, ಹಳತಿಗೆ ಹೊಳಪು, ಶಬ್ದ ಸಂಭ್ರಮ, ಕನಸು ಕಟ್ಟಿದ ಕವಿಗಳು, ಚೆನ್ನಪ್ಪ ಉತ್ತಂಗಿ-ಹಿಂದೂ ಸಮಾಜ ಹಿತಚಿಂತಕ, ಕುವೆಂಪು-ಶ್ಮಶಾನ ಕುರುಕ್ಷೇತ್ರಂ, ಬೇಂದ್ರೆಯವರ ಹರಟೆಗಳು, ವಿದ್ವತ್ತಿನ ಉಗ್ರಾಣ, ಎಲ್ಲಿ ಮನಕಳುಕಿರದೊ, ಬೆಳ್ಳೆ ರಾಮಚಂದ್ರ ರಾವ್ - ರಾಯರು ಕಂಡ ರಂಗು, ಹೆಬ್ಬಾಳು: ಎ.ಎನ್. ಮೂರ್ತಿರಾಯರು, ಪರಿಪೂರ್ಣ ಕಲಾವಿದ ಸೆರಿದಂತೆ 40 ಶೀರ್ಷಿಕೆಗಳು ಇವೆ. 

About the Author

ಬಾಲಸುಬ್ರಹ್ಮಣ್ಯ ಕಂಜರ್ಪಣೆ
(20 May 1954)

ಬಾಲಸುಬ್ರಹ್ಮಣ್ಯ ಕಂಜರ್ಪಣೆ- ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಕೆ.ಪಿ.ಬಾಲಸುಬ್ರಮಣ್ಯ ಅವರು, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಂಜರ್ಪಣೆ ಯಲ್ಲಿ (20-05-1954) ಜನಿಸಿದರು. ಕೃಷಿ ಹಿನ್ನೆಲೆಯ ಅವರು ಉತ್ತಮ ಬರಹಗಾರರು. ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ಪಡೆದು, ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಮಡಿಕೇರಿಯ ಸರಕಾರಿ ಹಿರಿಯ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಉಪನ್ಯಾಸಕರಾಗಿಯೂ ಅನುಭವವಿದೆ. ಪ್ರಸ್ತುತ ಕೊಡಗಿನ ಮಡಿಕೇರಿಯಲ್ಲಿ ನ್ಯಾಯವಾದಿಯಾಗಿದ್ದಾರೆ. ಸ್ವಯಂಪ್ರಭೆ, ಒಡೆದ ಪ್ರತಿಮೆಗಳು (ಕವನ ಸಂಕಲನಗಳು), ಅದೃಷ್ಟದ ಹುಡುಗಿ (ಕಥಾ ...

READ MORE

Related Books