ಗೋಪಾಳ ಗ್ಯಾನ

Author : ಬಿ. ಪೀರ್ ಬಾಷ

Pages 274

₹ 60.00




Year of Publication: 2019
Published by: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
Address: 2ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ ಜೆ.ಸಿ.ರಸ್ತೆ, ಬೆಂಗಳೂರು-02
Phone: 08022113147

Synopsys

‘ಗೋಪಾಳ ಗ್ಯಾನ’ ಬಿ. ಪೀರ್ ಬಾಷ ಅವರು ಸಂಪಾದಿಸಿರುವ ಪ್ರಬಂಧ ಸಂಕಲನ. ಕನ್ನಡದ ಸಾಂಸ್ಕೃತಿಕ ಪರಂಪರೆಯಲ್ಲಿ ಕನಕ ಹಳಬನೇ ಆದರೂ ಕನ್ನಡದ ಆಧುನಿಕ ಮನಸ್ಸು ತನ್ನ ಓದಿನ ಒಳ ಬಿಟ್ಟುಕೊಂಡಿದ್ದು ದಶಕಗಳ ಇತ್ತೀಚೆಗೆಂದೇ ಹೇಳಬೇಕು. ಸೂಕ್ಷ್ಮವಾಗಿ ಗಮನಸಿದರೆ, ಗುಡಿಯ ಒಳಕ್ಕೆ ಬಿಟ್ಟುಕೊಂಡಿರಲಿಲ್ಲ ಮತ್ತು ಓದಿನ ಹೊರಗಡೆ ನಿಲ್ಲಿಸಿದ ಮನಸ್ಥಿತಿ ಬೇರೆಬೇರೆ ಎನ್ನಲಾಗದು. ಕಿಂಡಿಯಿಂದ ಕೃಷ್ಣನನ್ನು ತೋರಿಸುವ ಮೌಲ್ಯವೇ ಈ ತನಕವೂ ಕಿಂಡಿಯ ಒಳಗಿಂದಲೇ ಕನಕನನ್ನು ನಿರೂಪಿಸಿದೆ. ಅಂತಹ ನಿರೂಪಣೆಯಲ್ಲಿ ವ್ಯಕ್ತವಾಗಿರುವುದು, ಭಕ್ತ ಕನಕ, ದಾಸ ಕನಕನ ಶಿಲ್ಪ ಮಾತ್ರ, ಆದರೆ ಬಯಲಿಗೆ ನಿಂತ ಕನಕನ ಅಂತರಂಗದ ವಿದ್ಯಮಾನಗಳನ್ನು ಆತನ ಅಭಿವ್ಯಕ್ತಿಯ ಮೂಲಕವೇ ಆದರೂ ಅರ್ಥ ಮಾಡಿಕೊಂಡರೆ,ಕನಕನನ್ನು ಕಾಣಿಸುವ ಒಳ-ಹೊರಗಣ ನಡುವಿನ ಮಸುಕಾದ ಗೆರೆ ನಿಚ್ಚಳವಾಗಿ ಗೋಚರಿಸುತ್ತದೆ. ಈ ವಿಭಜಕ ಗೆರೆ ಭಾರತೀಯ ಪರಂಪರೆಯ ಸಂದರ್ಭದಲ್ಲಿ ಸರ್ವಸಾಮಾನ್ಯವಾಗಿ ಅಸ್ತಿತ್ವದಲ್ಲಿದ್ದು ಅಸಾಮಾನ್ಯ ಪ್ರಭಾವಶಾಲಿಯಾದುದು. ಇಂತಹ ಹಲವು ವಿಚಾರಗಳನ್ನು ಅಧ್ಯಯನ ಪೂರ್ಣವಾಗಿ ಮಂಡಿಸಿರುವ ಪ್ರಬಂಧಗಳ ಸಂಕಲನವಿದು.

About the Author

ಬಿ. ಪೀರ್ ಬಾಷ
(01 May 1972)

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ-  ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ,  ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...

READ MORE

Related Books