ಒಂಬತ್ತು ಪ್ರಬಂಧಗಳ ಸಂಕಲನ ಲಲಿತ ಪ್ರಬಂಧ ಪ್ರಕಾರದ ಮಾದರಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತವೆ. ಮಲೆನಾಡಿನ ಜನಪದದ ಭಾಷೆಯ ಸೊಗಡನ್ನು ಹಿಡಿದಿಡಲು ಹವಣಿಸಿರುವುದು ಈ ಪ್ರಬಂಧಗಳ ವಿಶೇಷ, ಗ್ರಾಮೀಣ ಜನತೆ ಪೇಟೆಯವರಂತಾಗುತ್ತಿರುವ ಪಲ್ಲಟಿತ ಬದುಕಿನ ಸ್ಥಿತ್ಯಂತರಗಳನ್ನು ಚಿತ್ರಿಸುವಲ್ಲಿ ಉತ್ಸಾಹ ತೋರುತ್ತವೆ. ತಮ್ಮ ಸೂಕ್ಷ್ಮ ಅವಲೋಕನಗಳನ್ನು ಲಘು ಹಾಸ್ಯದ ಧಾಟಿಯಲ್ಲಿ ನಿರೂಪಿಸಬಲ್ಲ ಸಾಮರ್ಥ್ಯವನ್ನು ಲೇಖಕರು ಇಲ್ಲಿ ದಾಖಲಿಸಿದ್ದಾರೆ.
ಡಾ. ಶ್ರೀಪತಿ ಹಳಗುಂದ ಕೆ. ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪಳಗುಂದದವರು. ಎಂ.ಎ. ಪಿಎಚ್.ಡಿ. ಪದವೀಧರಾಗಿರುವ ಅವರು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯಗಂಗೆ (ಕಾವ್ಯ), ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು (ವಿಮರ್ಶೆ) ಪ್ರಕಟಿತ ಕೃತಿಗಳು. ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ (ಪಿಎಚ್.ಡಿ. ಮಹಾಪ್ರಬಂಧ). ಅವರಿಗೆ ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರ ಸಂದಿದೆ. ...
READ MORE