ಗಾಂಧಿ ಪ್ರತಿಮೆ

Author : ಎಚ್.ಟಿ. ಪೋತೆ

Pages 110

₹ 95.00




Year of Publication: 2020
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 0804011 4455

Synopsys

ಎಚ್ ಟಿ ಪೋತೆ ಅವರ ಪ್ರಬಂಧಗಳ ಸಂಕಲನ `ಗಾಂಧಿ ಪ್ರತಿಮೆ’. ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಅವರು “ಲಲಿತ ಪ್ರಬಂಧಕ್ಕೆ ವಿಷಯದ ಹಂಗಿಲ್ಲ. ಅದು ನೆಪ ಮಾತ್ರ. ಲಘು ದಾಟಿಯಲ್ಲಿ ಹರಿಯುವ ನದಿಯಂತೆ ಅಂಕು - ಡೊಂಕಾಗಿ, ಅಡ್ಡಾ ದಿಡ್ಡಿ ಹರಿದಾಡಬಹುದು. ಆದರೆ ಅದಕ್ಕೊಂದು ಕೂಡ ಉದ್ದೇಶವಂತೂ ಇದ್ದೇ ಇರುತ್ತದೆ. ಅದು ಇಲ್ಲಿ ಸಫಲವಾಗಿದೆ. ಬುದ್ಧ, ಬಸವ, ಫುಲೆ, ಅಂಬೇಡ್ಕರ್ ಅವರನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಪೋತೆ ಅವರ ಉದ್ದೇಶ” ಎಂದು ಅಭಿನಂದಿಸಿದ್ದಾರೆ.

About the Author

ಎಚ್.ಟಿ. ಪೋತೆ

ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...

READ MORE

Related Books