ಗಂಡಂದಿರಿಗೆ ಜೈಹೋ ಲಲಿತ ಪ್ರಬಂಧಗಳ ಸಂಕಲನ. ಕೃತಿಯಲ್ಲಿ 23 ಲಲಿತ ಪ್ರಬಂಧಗಳಿವೆ. ಭಾನಾಮತಿ ಫಜೀತಿ, ಗಂಡಂದಿರಿಗೆ ಜೈಹೋ.., ಸಿಎಂ ಗಡಿಬಿಡಿ.. ಕ್ಯಾಮರಾ ಓಡೋಡಿ.., ಚೇಳು ಕಚ್ಚಿ ವಿ.ಸಿ. ಬೆಚ್ಚಿ.., ಉಧೋ.. ಉಧೋ.. ಹೀಗೆ ಪ್ರಬಂಧಗಳ ಪಟ್ಟಿ ಸಾಗುತ್ತದೆ. ಇಲ್ಲಿಯೂ ಸಹ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ವೇಳೆ ನಡೆದ ಘಟನಾವಳಿಗೆ ಬರಹದ ಟಚ್ ಕೊಡಲಾಗಿದೆ.
ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಶಿವರಾಮ ಅಸುಂಡಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಅಸುಂಡಿ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಆರಂಭಿಸಿ ಮಾಧ್ಯಮದೊಂದಿಗೆ ನಂಟು ಬೆಳೆಸಿಕೊಂಡರು. ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ಅವರು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. ಬಳ್ಳಾರಿಯ ’ಈ ನಮ್ಮ ಕನ್ನಡ ನಾಡು’ ದೈನಿಕದಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ .ಟಿ.ವಿ.ಗೆ ಸೇರಿ ಹಾವೇರಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 2004ರಿಂದ ಕಲಬುರಗಿಯಲ್ಲಿ ಈಟಿವಿ ಪ್ರತಿನಿಧಿಯಾಗಿದ್ದಾರೆ. ’ದು.ನಿಂ.ಬೆಳಗಲಿ ಅವರ ದೇವದಾಸಿ’ ಕಾದಂಬರಿ ಕುರಿತು ಎಂ.ಫಿಲ್. ಪದವಿ ಮಾಡಿರುವ ಅಸುಂಡಿ ಅವರು ಡಾ.ಮಲ್ಲಿಕಾ ಘಂಟಿ ಮಾರ್ಗದರ್ಶನದಲ್ಲಿ ’ದಲಿತ ...
READ MORE