ಲೇಖಕ ಎಂ.ಎಸ್.ಮೂರ್ತಿ ಅವರ ’ದೇಸಿ ನಗು” ಕೃತಿಯು ಮೊದಲು ಮದ್ರಣ ಕಂಡಿದ್ದು -2006ರಲ್ಲಿ, ನಂತರ 2007, 2008 ಹಾಗೂ 2012 ಹೀಗೆ ಒಟ್ಟು ನಾಲ್ಕು ಬಾರಿ ಮುದ್ರಣ ಕಂಡಿದೆ. ಮೂಲತಃ ಕಲಾವಿದರಾದ ಮೂರ್ತಿ, ಸಾಹಿತ್ಯಕವಾಗಿಯೂ ಉತ್ತಮ ಪ್ರಬಂಧಗಳನ್ನು ಬರೆದಿದ್ದಾರೆ. ರಾಜ್ಯಾದ್ಯಾಂತ ಗ್ರಾಮೀಣ ಪ್ರದೇಶಗಳಲ್ಲಿ ದೃಶ್ಯಪ್ರಜ್ಞೆ ಪುನಶ್ಚೇತನಕ್ಕಾಗಿ ರೈತರೊಂದಿಗೆ ನಡೆಸಿದ ಸಂವಾದಗಳ ಮೂಲಕ ಕಂಡುಕೊಂಡ ಜ್ಞಾನವನ್ನು ಅವರು ಅಕ್ಷರರೂಪಕ್ಕೆ ಇಳಿಸಿದ್ದು, ಇಲ್ಲಿಯ ಬಹುತೇಕ ಲೇಖನಗಳಲ್ಲಿ ಕಾಣಬಹುದು.
ಎಂ.ಎಸ್.ಮೂರ್ತಿ- 1960ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಎಂ.ಎಸ್.ಮೂರ್ತಿ ಅವರು 1982ರಲ್ಲಿ 5 ವರ್ಷಗಳ ಚಿತ್ರಕಲೆ ಹಾಗೂ ಶಿಲ್ಪಕಲೆಯ ಡಿಪ್ಲಮಾ ವಿದ್ಯಾಬ್ಯಾಸ ಮಾಡಿದ್ದಾರೆ. ಕಾಲೇಜು ಶಿಕ್ಷಣದಲ್ಲಿ ಮನಃಶಾಸ್ತ್ರ ಅಭ್ಯಾಸ, ನಂತರ ಪತ್ರಿಕೋದ್ಯಮದಲ್ಲಿ ಇಲಸ್ಟೇಟರ್, ವಿನ್ಯಾಸಕಾರ ಹಾಗೂ ಕಲಾ ನಿರ್ದೇಶಕಾಗಿ ಉದ್ಯೋಗ, ಆನಂತರ ಉದ್ಯೋಗ ತ್ಯಜಿಸಿ ಪೂರ್ಣಾವಧಿ ಕಲಾವಿದನಾಗಿ ಅನೇಕ ಕಲಾ ಪ್ರಕಾರಗಳಲ್ಲಿ ಪ್ರಯೋಗ, ರಾಜ್ಯ ರಾಷ್ಟ್ರ, ಅಂತರಾಷ್ಟ್ರೀಯಮಟ್ಟದ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 2003ರಲ್ಲಿ ಇರಾನ್ ದೇಶದ ಆಹ್ವಾನದ ಮೇರೆಗೆ ಅಂತರರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಭಾರತವೂ ಸೇರಿದಂತೆ ಅಂತರರಾಷ್ಟ್ರೀಯ ಬೈನಾಲೇ ಪ್ರಶಸ್ತಿ.(ಬುದ್ಧ ದ ಲೈಟ್ ಕೃತಿಗೆ) ದೆಹಲಿಯ ನ್ಯಾಶನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ ಶಾಶ್ವತ ...
READ MORE