ಭಾರತೀಯ ಚಿತ್ರಕಲೆಯ ಸಂಕ್ಷಿಪ್ತ ಇತಿಹಾಸ, ಭಾರತೀಯ ಚಿತ್ರಕಲೆಯ ವಿಕಾಸ, ಅಜಂತಾದ ಕಲೆ, ದೇವಿಪ್ರಸಾದ ರಾಯ್ ಚೌಧರಿ, ರಾಗಮಾಲಾ ಚಿತ್ರಗಳು, ಸಂಸ್ಕೃತಿ ಮತ್ತು ಲಲಿತ ಕಲೆಗಳು ಮುಂತಾದ ವಿಷಯ ವೈವಿಧ್ಯಗಳು ಒಳಗೊಂಡ ಈ ಕೃತಿಯಲ್ಲಿ ಪ್ರಬಂಧಗಳಿವೆ. ಅತ್ಯಾಧುನಿಕ ಚಿತ್ರಕಲೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಚಿತ್ರಕಲೆ ಉಳಿಸಿಕೊಂಡು ಹೋಗುವ ಚಿಂತನೆಯೂ ಇದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಚಿತ್ರಕಲೆಗೆ ಸಾಕಷ್ಟು ಅವಕಾಶ ಇಲ್ಲ ಎಂಬ ಕೊರಗೂ ಇದೆ. ಈ ಎಲ್ಲ ಪ್ರಬಂಧಗಳ ಹಿಂದೆ ಅ.ನ.ಕೃ ಅವರ ಅಧ್ಪಯನದ ಪರಿಶ್ರಮ, ವಿಶ್ಲೇಷನಾತ್ಮಕ ಚಿಂತನೆ ಕಾಣಬಹುದು. ಈ ಕೃತಿಯು 1970 ರಲ್ಲಿ ಮೊದಲ ಮುದ್ರಣ ಕಂಡಿತ್ತು.
©2024 Book Brahma Private Limited.