ಚಂದನ

Author : ಭಾರತೀ ಕಾಸರಗೋಡು

Pages 127

₹ 50.00




Year of Publication: 2000
Published by: ಅಂಜನಾ ಪ್ರಕಾಶನ
Address: ಬೆಂಗಳೂರು

Synopsys

‘ಚಂದನ’ ಭಾರತೀ ಕಾಸರಗೋಡು ಅವರ ಪ್ರಬಂಧ ಸಂಕಲನವಾಗಿದೆ. ಲವಲವಿಕೆಯಿಂದ ಕೂಡಿದ, ಸುಲಲಿತ ಭಾಷೆಯ ಈ ಪ್ರಬಂಧ ಸಂಕಲನ ವಿಷಯ ವೈವಿಧ್ಯತೆಯಿಂದ ಕೂಡಿದ್ದು ಮನಸ್ಸಿಗೆ ಮುದ ನೀಡುತ್ತದೆ. ಬದುಕಿನ ಸೌಂದರ್ಯ ಸಂತೋಷಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತ ಚಿಕ್ಕ ಚಿಕ್ಕ ವಿಷಯಗಳಾದರೂ ಅದರಲ್ಲೇ ಮಹತ್ತರವಾದ ಗುಣಗಳನ್ನು ಕಾಣುತ್ತ ನಮ್ಮೊಂದಿಗೆ ಭಾರತಿಯವರು ಸ್ಪಂದಿಸುವ ರೀತಿ ಆಪ್ಯಾಯಮಾನ. ಹದಿನಾರು ಪ್ರಬಂಧಗಳು ಇಲ್ಲಿ ನಮ್ಮೊಂದಿಗೆ ಸ್ವಲ್ಪವೂ ಅಂಜದೆ - ಅಳುಕದೆ ಮುಖಾಮುಖಿಯಾಗಿ ಮಾತನಾಡುತ್ತವೆ.

About the Author

ಭಾರತೀ ಕಾಸರಗೋಡು

ಕನ್ನಡ ಬರಹಗಾರ್ತಿ ಭಾರತೀ ಕಾಸರಗೋಡು ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಮೊದಲನೆಯ ಕೃತಿ ವೀಣೆಯ ನೆರಳಲ್ಲಿ, ಡಾ. ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನವನ್ನು ಕುರಿತದ್ದು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಬಹುಮಾನಗಳು ದಕ್ಕಿವೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತಿಯವರ ಇತರ ಪ್ರಕಟಿತ ಪುಸ್ತಕಗಳು ಚಂದನ (ಪ್ರಬಂಧ ಸಂಕಲನ), ರಾಸದರ್ಶನ (ತಂದೆ ಶ್ರೀ ಸಮೇತನಹಳ್ಳಿ ರಾಮರಾಯರಿಗೆ ಅರ್ಪಿಸಿದ ಅಭಿನಂದನ ಗ್ರಂಥ), ಜೀವಿ: ಜೀವ--ಭಾವ (ವಿದ್ವಾಂಸ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಸಂಕ್ಷಿಪ್ತ ಜೀವನ ಚರಿತ್ರೆ), ಮತ್ತು ಬಂಧಬಂಧುರ (ಸಂಪಾದಿತ ...

READ MORE

Related Books