ಕೃಷಿ ವಿಜ್ಞಾನಿ, ಲೇಖಕ ಕೆ.ಎನ್, ಗಣೇಶಯ್ಯ ಅವರ ’ಭಿನ್ನೋಟ’ ಪ್ರಬಂಧಗಳ ಸಂಕಲನ.
ನಾವೇಕ ನಗುತ್ತೇವೆ, ಆಳುತ್ತೇವೆ, ದುಃಖಿಸುತ್ತೇವೆ, ಸಂತೋಷಪಡುತ್ತೇವೆ? ಅತಿಯಾದ ಸುಖ ಮತ್ತು ದುಃಖ ಎರಡೂ ಒಂದೇ ರೀತಿಯ ಭಾವನೆಗಳೆ? ನಮ್ಮ ಬದುಕಿನ ಇಂತಹ ನೂರಾರು ನಡಗಳನ್ನು, ಅಭ್ಯಾಸಗಳನ್ನು, ಜೀವನ ರೀತಿನೀತಿಗಳನ್ನು ಇವು ಏಕೆ ಹೀಗೆ ಎಂದು ಪ್ರಶ್ನಿಸದೆಯೇ ನಾವು ಇಡೀ ಜೀವನ ಕಳೆದು ಬಿಡುತ್ತೇವೆ - ಅವಿಲ್ಲದೆಯೇ ಬದುಕು ಸಾಗಲು ಸಾಧ್ಯವಿಲ್ಲವೆ? ಎನ್ನುವುದನ್ನೂ ಪ್ರಶ್ನಿಸದೆ. ನಮ್ಮ ಮನಸ್ಸನ್ನೂ ಸೆರೆಯಾಗಿಸಿಕೊಳ್ಳುವಷ್ಟು ಶಕ್ತಿಯುತವಾದ ಆ ನಡನುಡಿಗಳನ್ನು ಅರ್ಥ ಮಾಡಿಕೊಳ್ಳದೆಯೇ ಈ ಪ್ರಪಂಚ ತೊರೆದು ಹೋಗುತ್ತೇವೆ ಎನ್ನುವ ಸತ್ಯ ಘೋರ ಶಾಪ ಅನಿಸುತ್ತದೆ. ಆ ಶಾಪಕ್ಕೆ ನಿವಾರಣೆ ಇದೆಯೆ? ಈ ಅಜ್ಞಾನದ ಕತ್ತಲೊಳಗೆ ನುಗ್ಗಿ ಹುಡುಕಾಡಬಹುದೆ? `ಭಿನ್ನೋಟ' ಕೃತಿ ಅಂತಹದ್ದೊಂದು ಪ್ರಯತ್ನವಾಗಿದೆ.
ಜೀವನದ ಹಲವು ನಡೆ ನುಡಿಗಳ ಮೂಲವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ.ನಮ್ಮ ವರ್ತನೆಯ ಮೂಲವನ್ನು ಅರಿಯುವುದರಿಂದ ನಮ್ಮನ್ನು ನಾವೇ ಅರಿತುಕೊಳ್ಳಬಹುದು ಎಂಬ ನಂಬಿಕೆಯಿಂದ, ಭಿನ್ನ ರೀತಿಯ ಈ ಲೇಖನಗಳು ಓದುಗರಿಗೆ ಸಾಕಷ್ಟು ಅಚ್ಚರಿ - ವಿಚಾರವನ್ನು ಉಂಟುಮಾಡುತ್ತವೆ.
©2024 Book Brahma Private Limited.