ಇದೊಂದು ಭಾವನೆಗಳ ಸಂಗಮ. ಈ ಕೃತಿಯ ಮೂಲಕ ಲೇಖಕಿ ತಮ್ಮ ಮನದಾಳದ ಮಾತುಗಳಿಗೆ ಅಕ್ಷರ ರೂಪ ಕೊಟ್ಟಿದ್ದಾರೆ. ಪ್ರಬಂಧದ ರೂಪದಲ್ಲಿ ಓದುಗರಿಗೆ ಲೇಖನಗಳನ್ನು ಬರೆದಿದ್ದಾರೆ. ಎಲ್ಲಾವೂ ಕೂಡ ವಿಭಿನ್ನ ರೀತಿಯ ವಿಷಯಗಳ ಬಗ್ಗೆ ಬರೆದಿದ್ದಾರೆ. ಸ್ತ್ರೀಯರ ಬಗ್ಗೆ ಹೆಚ್ಚಿನ ಬರಹಗಳು, ಹೆಣ್ಣು ಮಕ್ಕಳ ಅತೀ ಪ್ರೀತಿಯ ಗಾಜಿನ ಬಳೆಗಳು, ಬಣ್ಣಗಳ ವಿಶೇಷ ಮಹತ್ವ ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ಕಾಣುವ, ದೊರಕುವ ವಿಶಿಷ್ಟ ಬಳೆಗಳ ಮಾಹಿತಿಯನ್ನು ಈ ಕೃತಿಯಲ್ಲಿ ಚೆನ್ನಾಗಿ ಬರೆದಿದ್ದಾರೆ.
ಲಲಿತ ಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದವರು.ತಾಯಿ ಸಂಗೀತಗಾರ್ತಿ ಮತ್ತು ಬರಹಗಾರ್ತಿ,ತಂದೆ ಸರ್ಕಾರಿ ಶಾಲಾ ಶಿಕ್ಷಕರು. ಮದುವೆಯ ನಂತರ ಆಂದ್ರ ಪ್ರದೇಶದ ವಿಶಾಖ ಪಟ್ಟಣಂನಲ್ಲಿ 16 ವರ್ಷ ವಾಸ ಮಾಡಿದ್ದಾರೆ.. ಚಿಕ್ಕ ವಯಸ್ಸಿನಿಂದಲೂ ಬರವಣಿಗೆ ಹವ್ಯಾಸ ಬೆಳೆಸಿಕೊಂಡ ಇವರ ಸಾಹಿತ್ಯ ಸೇವೆಗಾಗಿ ಪ್ರಶಸ್ತಿ ಪತ್ರ.ನೆನಪಿನ ಕಾಣಿಕೆಗಳು ಪಡೆದಿರುತ್ತಾರೆ. ರಾಷ್ಟ್ರೀಯ ಅಂತರ ರಾಷ್ಟ್ರೀಯ ಅಖಿಲಭಾರತ ಕವಯತ್ರಿಯರ ಸಮ್ಮೇಳನ ಸಂಸ್ಥೆಯಲ್ಲಿ pattern member, Executive ಮಾತ್ರವಲ್ಲದೆ ಬೆಂಗಳೂರು ಝೋನ್ ನ ಅಧ್ಯಕ್ಷರೂ ಆಗಿದ್ದಾರೆ.. ನಾಲ್ಕು ವರ್ಷಗಳು ಕರ್ನಾಟಕದ ಇನ್ಚಾರ್ಜ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನಕ್ಕಾಗಿ, ಗುಲ್ಬರ್ಗ ಬೀದರ್, ಮೈಸೂರು, ...
READ MORE