‘ಬೀದಿ ಜಗಳ’ ಕೆ ಸತ್ಯನಾರಾಯಣ ಅವರ ಕೃತಿಯಾಗಿದೆ. ಮೊದಮೊದಲ ಓದುಗನಾಗಿ ಕೆ ಸತ್ಯನಾರಾಯಣರ ‘ಬೀದಿ ಜಗಳ’ ಗಳನ್ನು ನೋಡಿದಾಗ ಹೊರಾಂಗಣದಲ್ಲಿ ಇವನ್ನೆಲ್ಲ ಇಷ್ಟು ಆಸ್ಥೆಯಿಂದ ಗಮನಿಸುವ ಇವರ ‘ಒಳಾಂಗಣದ ಬದುಕು’ ಹೇಗಿರಬಹುದೆಂಬ ಕುತೂಹಲ ಮೂಡಿತು. ಸಂಕಲನದಲ್ಲಿನ ಪಬಂಧಗಳನ್ನು ಓದುತ್ತಾ, ಇವರಿಗೆ ಹೊಳೆದ ವಿಷಯಗಳು ನನಗೆ ಎಂದೂ ಹೊಳೆಯಲಿಲ್ಲವಲ್ಲಾ ಎಂದು 'ಅಲವತ್ತಿಕೊಳ್ಳುವುದು' ದೈನಂದಿನ ಪಾಡಾಯಿತು.
ಬೀದಿಜಗಳಗಳು ಎಂದಮೇಲೆ ಹೊಡೆದಾಟ ಇರಬೇಕಾದ್ದೇ. ಅದಕ್ಕೆ ಮಸಲ್ ಪವರ್ ಎಷ್ಟು ಮುಖ್ಯವೋ, 'ಮಸಲ್ ಮೆಮೊರಿ'ಯೂ ಅಷ್ಟೇ ಮುಖ್ಯವಾದೀತು. ಕೆಲವರು ಒರಿಜಿನಲ್ ಜಗಳಗಂಟರಾಗಿ ಹೋರಾಟವೇ ತಮ್ಮ ಜೀವನವೆಂದು ಭಾವಿಸಿದ್ದರೆ, ಇನ್ನು ಕೆಲವರು ತಮ್ಮ ತಪ್ಪಿಲ್ಲದೆಯೂ ಜಗಳದ ಅಂಗವಾಗಬೇಕಾಗಿ ಬಂದಾಗ 'ನಮಗೇ ಯಾಕೆ ಹೀಗಾಗುತ್ತೆ?” ಎಂದುಕೊಳ್ಳುತ್ತಾರೆ. ಜಗಳದ ಕಾವಿನಲ್ಲಿ ಇಲ್ಲದ ಹಿರಿಯರ ಬಗ್ಗೆಯೂ ಪ್ರಸ್ತಾಪ ಬಂದಾಗ ತೀರಿಹೋದವರನ್ನು ಕುರಿತು ಮಾತು ಬೇಕೆ?' ಎಂಬ ಭಾವ ಮೂಡುವುದು ಸಹಜ. 'ಸಂಬಂಧಗಳನ್ನು ಏಕೆ ತೊರೆಯಬೇಕು?' ಜಗಳವಾಡುವುದು ಬೇಡ: 'ಇತರೆಯವರು ಹೇಳಿದರೂ, 'ಇಳಿವಯಸ್ಸಿನ ಕಾಠಿಣ್ಯ ಸ್ವಾರ್ಥ ಇತ್ಯಾದಿಗಳು' ಜಗಳದತ್ತ ಮನವನ್ನು ಸೆಳೆಯುವುದುಂಟು. ಇಬ್ಬರೇ ಜಗಳವಾಡಿದರೇನು ಚೆನ್ನ? ಅದರ ವೀಕ್ಷಣೆಗೆ ಒಂದಷ್ಟು 'ಹ್ಯಾಂಗರ್‍ಸ್ ಆನ್' ಇರಬೇಕು.
ಮೇಲ್ಕಂಡ ಪ್ಯಾರಾದಲ್ಲಿ ಬೋಲ್ಡ್ ಆಗಿರುವುದೆಲ್ಲ ಈ ಕೃತಿಯಲ್ಲಿನ ಪ್ರಬಂಧಗಳ ಶೀರ್ಷಿಕೆಗಳು, ಅಪರೂಪದ ವಿಷಯಗಳನ್ನು ಹೆಕ್ಕಿಕೊಂಡು ಪ್ರಬಂಧ ರಚಿಸುವ ಕೌಶಲವುಳ್ಳ ವಿಮರ್ಶಕ, ಅಂಕಣಕಾರ, ಕತೆಗಾರ, ಕಾದಂಬರಿಕಾರ ಕೆ. ಸತ್ಯನಾರಾಯಣರ ಈ ಕೃತಿಯದು ಎನ್. ರಾಮನಾಥ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.