'ಬಣ್ಣವೊರೆಸುವ ಎಣ್ಣೆಗನ್ನಡಿ' ಹನ್ನೊಂದು ಲಲಿತ ಪ್ರಬಂಧಗಳನ್ನು ಒಳಗೊಂಡ ಕೃತಿ. ತಾವು ಕಂಡ ಪ್ರಸಂಗಗಳನ್ನೇ ಲೇಖನಿ ಮೂಲಕ ಹುರಿಗೊಳಿಸಿ ಓದುಗರಿಗೆ ನೀಡಿದ್ದಾರೆ ಪ್ರಜ್ಞಾ ಮತ್ತಿಹಳ್ಳಿ. ನಾಟಕ ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದನ್ನು ಅಲ್ಲಿ ಬಣ್ಣಕಳಚುವ ಪಾತ್ರಗಳೇ ಹೇಳಿಬಿಡುವುದರಿಂದ ಕೃತಿ ವಿಶಿಷ್ಟ ಎನಿಸುತ್ತದೆ.
ಲೇಖಕಿ ರೇಣುಕಾ ರಮಾನಂದ್ ಕೃತಿಯ ಕುರಿತು ಸಾಮಾಜಿಕ ಜಾಲತಾಣವೊಂದರಲ್ಲಿ ಚರ್ಚಿಸಿರುವುದು ಹೀಗೆ: ’ನೆನಪಿನ ರಂಗಸ್ಥಳದಲ್ಲಿ ಆಟ ಕುಣಿದು ಹೋದ ಮೇಲೆ ಬಿದ್ದ ಒಂದೊಂದೇ ಮಣಿಮುತ್ತುಗಳನ್ನು ಬಣ್ಣದ ಜರಿಗಳನ್ನು ಹೆಕ್ಕಿ ಒಂದು ಸರ ಪೋಣಿಸಿದಂತೆ ಪ್ರಜ್ಞಾ ಅವರು ಮನಸಿಗಿಷ್ಟವಾಗುವ ನುಡಿಚಿತ್ರಗಳನ್ನು ಪೋಣಿಸಿ ನಮ್ಮೆದುರಿಗಿಟ್ಟಿದ್ದಾರೆ. ಹಲವು ಬಣ್ಣಗಳ ಸೈಜುಗಳ ಹಾರ ಇದು... ಬಲು ಇಷ್ಟವಾಯ್ತು ನನಗೆ’
©2024 Book Brahma Private Limited.