ಅವರವರ ಭಕುತಿಗೆ ಎಂಬುದು ನಳಿನಿ ಮೈಯ ಅವರ ಪ್ರಧಾನ ಸಂಪಾದಕತ್ವದಡಿ ಹಾಗೂ ಸುಮತಿ ಮುದ್ದೇನಹಳ್ಳಿ ಹಾಗೂ ಕಾವ್ಯಾ ನಾಗರಕಟ್ಟೆ ಅವರ ಸಂಪಾದಕತ್ವದಡಿ ಮೂಡಿದ ಪ್ರಬಂಧಗಳ ಸಂಕಲನ. ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅವರು ಕೃತಿಯ ಕುರಿತು ‘ಅಮೆರಿಕೆಯ ಕನ್ನಡಿಗರ ಕೃತಿ ಇದು. ಭಕ್ತಿ ಎಂದರೆ ಅವರಿಗೆ ಪರೋಕ್ಷವಾಗಿ ನಾಡು-ನುಡಿಯ ದರ್ಶನ. ನಾಡಿನ ಇತಿಹಾಸದ ದರ್ಶನ. ಭಕ್ತಿಯ ಸಂವೇದನೆಯಿಂದ ಒಂದು ಭಾಷೆ ಪಡೆಯುವ ಆಳ, ಬಾಗು, ಬಳಕು, ಭಾವಶಕ್ತಿ, ಇದೆಲ್ಲ ರೋಮಾಂಚಕ ಸಂಗತಿ. ಭಕ್ತಿಯು ಎಲ್ಲವನ್ನೂ ಕರಗಿಸಬಲ್ಲ ಬೆಂಕಿಯಾಗಿದೆ. ಕರಗದೇ ಹರಿಯುವುದಿಲ್ಲ. ಕರಗದೇ ಬೆಸೆಯುವುದಿಲ್ಲ. ಭಕ್ತಿಯು ಕರಗಿಸುವ, ಕರಗಿಸಿ ಹರಿಯಿಸುವ, ಹರಿಯಿಸಿ ಬೆಸೆಯುವಂತೆ ಮಾಡುವ ಹೃದಯದ ಪವಾಡವಾಗಿದೆ ಎಂದು ಕೃತಿಯಲ್ಲಿಯ ಪ್ರಬಂಧಗಳ ಕುರಿತು ಹೇಳಿದ್ದರೆ, ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಅವರು ‘ಇಲ್ಲಿಯ ಪ್ರಬಂಧಗಳನ್ನು ಓದಿದಾಗ ಎಷ್ಟೊಂದು ರೀತಿಯ ಕಾವ್ಯಾನುಭವಗಳಿಗೆ ಕಾರಣವಾಗಿದೆ ಎಂದು ಅರಿವಾಗಿ ಆಶ್ಚರ್ಯವಾಯಿತು. ಸ್ವತಃ ಮೂವರು ಸಂಪಾದಿಕೆಯರು, ಒಂದು ವಸ್ತುವನ್ನು ಇಟ್ಟುಕೊಂಡು ವಿವಿಧ ಬರಹಗಾರರಿಂದ ಲೇಖನಗಳನ್ನು ಬರೆಯಿಸಿರುವುದು ಸಾಮಾನ್ಯ ಸಂಗತಿಯಲ್ಲ; ಇದೊಂದು ಸಾಂಸ್ಕೃತಿಕ ಸಾಹಸ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.