ಮೂಲ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಬರೆದಿರುವ ಪ್ರಬಂಧಗಳ ಸಂಕಲನ ಅನುರಣನ. ವಿಜ್ಞಾನ ಲೇಖಕ ಟಿ.ಎಸ್. ಚನ್ನೇಶ್ ಅವರು ಈ ಕೃತಿಯನ್ನು ರಚಿಸಿದ್ದಾರೆ. ಸರಳ ಭಾಷೆಯಲ್ಲಿ ವಿಜ್ಞಾನದ ಕ್ಲಿಷ್ಟ ಪರಿಕಲ್ಪನೆಗಳನ್ನು ವಿವರಿಸಿದ್ದು ಈ ಕೃತಿಯ ಹೆಗ್ಗಳಿಕೆ.
ವಿಜ್ಞಾನ ಸಾಹಿತ್ಯದಲ್ಲಿ ಅತ್ಯಂತ ಆಸ್ಥೆಯುಳ್ಳ ಟಿ. ಎಸ್. ಚನ್ನೇಶ್ ಅವರು ಬೆಂಗಳೂರಿನ ಸೆಂಟರ್ ಫಾರ್ ಪಬ್ಲಿಕ್ ಅಂಡರ್ ಸ್ಟ್ಯಾಂಡಿಂಗ್ ಆಫ್ ಸೈನ್ಸ್ ನಲ್ಲಿ ಕೃಷಿ ವಿಜ್ಞಾನಿಯಾಗಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಕೃಷಿಯಲ್ಲಿ ರೈತ ಸಮಸ್ಯೆಗಳನ್ನು ಜ್ವಲಂತವಾಗಿ ಚಿತ್ರಿಸಿದ ಕೃತಿ ‘ಉಳುವವರ ಪರ ವಕಾಲತ್ತು’. ‘ಅನುರಣನ’ ಅವರ ವಿಜ್ಞಾನ ಲೇಖನಗಳ ಸಂಕಲನ. ‘ನೊಬೆಲ್ 2017’ ಹಾಗೂ ‘ಅಮೃತಬಿಂದು’ ಅವರ ಕೃತಿಗಳು. ...
READ MORE