ಅಳಿಯ ದೇವೂಭವ ಇದೊಂದು ಲಲಿತ ಪ್ರಬಂಧವಾಗಿದ್ದು ಇದರಲ್ಲಿ ವಿಭಿನ್ನ ವಿಷಯದ ಸುಮಾರು ಹದಿನೈದು ಲಲಿತ ಪ್ರಬಂಧಗಳಿವೆ ಪ್ರತಿಯೊಂದು ಪ್ರಬಂಧವು ಹಳ್ಳಿ ಬದುಕಿನಲ್ಲಿ ದಿನ ನಿತ್ಯ ನಡೆಯುವ ನಡೆಯಬಹುದಾದ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ. ಹಾಸ್ಯ ವ್ಯಂಗ್ಯ ವಿಷಾದ ನೋವು ನಲಿವು ರೋಚಕತೆ ಪ್ರಬಂಧಗಳಲ್ಲಿ ಕಾಣಬಹುದು ಸರಳವಾಗಿ ಓದಿಸಿಕೊಂಡು ಕುತೂಹಲ ಮೂಡಿಸುತ್ತವೆ.
ಲೇಖಕ ಶರಣಗೌಡ ಪಾಟೀಲ ಅವರು ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು) ಪ್ರಶಸ್ತಿ-ಪುರಸ್ಕಾರಗಳು: ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ...
READ MORE