ದೀಪಕ ಬಿಳ್ಳೂರ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. 1977 ಜುಲೈ 22 ರಂದು ಜನನ. ತಂದೆ ಪ್ರಭಾಕರ ಬಿಳ್ಳೂರ ತಾಯಿ ಸುವರ್ಣಾ ಬಿಳ್ಳೂರ. ಬರವಣಿಗೆ ಅವರ ಆಸಕ್ತಿಯ ಕ್ಷೇತ್ರ. ರಾಜ್ಯದ ಅನೇಕ ದಿನಪತ್ರಿಕೆಗಳಲ್ಲಿ ಇವರ ಕವನ ಹಾಗೂ ಲೇಖನ ಬರಹಗಳು ಪ್ರಕಟಗೊಂಡಿವೆ. ಪೂರ್ವ ಶಿಕ್ಷಣವನ್ನು ಶಿರಗುಪ್ಪಿ ಮತ್ತು ಕಾಗವಾಡದಲ್ಲಿ, ತಮ್ಮ B.E (Mechanical) ಪದವಿಯನ್ನು ವಿಜಯಪುರದ B.L.D.E'S. ಇಂಜಿನೀಯರಿಂಗ್ ಕಾಲೇಜಿನಲ್ಲಿ ಓದಿ, 2000ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪದವಿ ಪಡೆದರು. ಪ್ರಸ್ತುತ 'ಪೂಜ್ಯ ಮಾತಾಜಿ ಪ್ರಕಾಶನ" ಎಂಬ ಪ್ರಕಾಶನ ಸಂಸ್ಥೆಯನ್ನು ಅಥಣಿಯಲ್ಲಿ ಸ್ಥಾಪಿಸಿ ಮೂರು ಕವನ ಸಂಕಲನಗಳನ್ನು, ಸಾಮಾಜಿಕ ರಂಗನಾಟಕವನ್ನು ಕೃತಿಯ ಮೂಲಕ ತಮ್ಮದೇ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಅಂಚೆ ಚೀಟಿ ಸಂಗ್ರಹ ಇವರ ಹವ್ಯಾಸವಾಗಿರುತ್ತದೆ.