ಸಾಹಿತ್ಯದ ಸಪ್ತಧಾತುಗಳು

Author : ಯಶವಂತ ಚಿತ್ತಾಲ

Pages 120

₹ 75.00




Year of Publication: 2010
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಯಶವಂತ ಚಿತ್ತಾಲರ ’ಸಾಹಿತ್ಯದ ಸಪ್ತಧಾತುಗಳು’ ಎಂಬ ಈ ಕೃತಿ, 'ಸೃಜನಜಿಜ್ಞಾಸೆ'ಯ ಒಂದು ಪ್ರಯೋಗ. ಇಂತಹ ಜಿಜ್ಞಾಸೆಯು ಸಾಹಿತ್ಯದ ಬಗ್ಗೆ ಒಟ್ಟಾರೆ ಹೊಸ ಗ್ರಹಿಕೆಗಳನ್ನು ಮಂಡಿಸುತ್ತದೆ. ಜೊತೆಗೆ ಸಂಬಂಧಿಸಿದ ಲೇಖಕನ ಕೃತಿಯ ಅಭ್ಯಾಸದಲ್ಲಿ ಓದುಗನಿಗೆ ಉಪಯುಕ್ತ ಆಗಬಹುದಾದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡುತ್ತದೆ.

ಹಿರಿಯ ಕವಿ ವಿಮರ್ಶಕ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಕೃತಿಯ ಕುರಿತು ’ಸೃಜನ ಪ್ರಕ್ರಿಯೆಯ ಜಿಜ್ಞಾಸೆಯು ಸಾಹಿತ್ಯ ಮೀಮಾಂಸೆಗಿಂತ ಭಿನ್ನ. ವಿವಿಧ ಸೃಷ್ಟಿಶೀಲರು ತಮ್ಮ ಕ್ರಿಯಾಶೀಲತೆಯ ಒತ್ತಾಯ, ಭಾಷೆಯ ಮೂಲಕ, ಕೈಜಾರಿದ ಅನುಭವವೊಂದು ಮೈದಾಳುವ ಚೋದ್ಯ, ಅನಿರೀಕ್ಷಿತವಾದದ್ದು ರೂಪಕ ಶರೀರಿಯಾಗಿ ಪ್ರತ್ಯಕ್ಷವಾಗುವ ವೈಚಿತ್ರ್ಯ, ಬರವಣಿಗೆಯ ಹಿಂದಿನ ತಾತ್ವಿಕತೆ, ಬರವಣಿಗೆಯ ಕ್ರಮ, ಬರೆಯುವ ಕಾಲದ ಮನಃಸ್ಥಿತಿ, ಭಾಷೆ-ಲಯವಸ್ತುವಿನ ಆಯ್ಕೆಯ ಸಮಸ್ಯೆ, ವಸ್ತು ಮತ್ತು ಬಂಧದ ಬಿಕ್ಕಟ್ಟು, ಕೃತಿಯ ಆಂತರಿಕ ಮಿಡಿತ ಮತ್ತು ಬಹಿರಂಗದ ಒತ್ತಾಯಗಳ ಮುಖಾಮುಖಿ ಮುಂತಾದ ಸಂಗತಿಗಳನ್ನು, ತಮ್ಮ ಸೃಜನಶೀಲ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಚರ್ಚಿಸಿದಲ್ಲಿ, ಅದು 'ಸೃಜನಜಿಜ್ಞಾಸೆ' ಯನ್ನು ಒಂದು ಶಾಸ್ತ್ರವಾಗಿ ಬೆಳೆಸಬಲ್ಲುದು’ ಎಂದು ಬರೆದಿದ್ದಾರೆ.

ಎಚ್‌ಎಸ್‌ವಿ ಅವರು ’ಒಂದು ಹಕ್ಕಿಯ ಅಸ್ತಿತ್ವವನ್ನು ಹಕ್ಕಿಯ ರೆಕ್ಕೆಗಳು' ಮತ್ತು 'ಆಕಾಶ' ಎರಡೂ ಕೂಡಿ ನಿರ್ಣಯಿಸುತ್ತವೆ ಎಂಬುದನ್ನು ನಾವು ಒಪ್ಪುವುದಾದರೆ, ಲೇಖಕನ ಸೃಜನ ಜಿಜ್ಞಾಸೆಯು, ಕೃತಿಯ ಗ್ರಹಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ಒಪ್ಪಲೇಬೇಕು’ ಎಂದು ವಿವರಿಸುತ್ತಾರೆ.

 

About the Author

ಯಶವಂತ ಚಿತ್ತಾಲ
(03 August 1928 - 22 March 2014)

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...

READ MORE

Related Books