'ಭಾಷೆ ಬೇರೆ ಆತ್ಮವೊಂದೇ' ಎಂಬ ಲೇಖನದಲ್ಲಿ ಭಾಷಾಂತರದ ಎಡವಟ್ಟುಗಳನ್ನು, ಅನುವಾದವನ್ನು ನಮ್ಮದೇ ಮೂಲ ಎನ್ನುವಷ್ಟು ಸೊಗಸಾಗಿಸುವ ಪರಿಯನ್ನು ವಿವರಿಸುತ್ತಾರೆ. ಕನ್ನಡ ಅನುವಾದ ಜಗತ್ತಿಗೆ ದಿಗ್ಗಜರ ಕೊಡುಗೆಗಳನ್ನು ಸ್ಮರಿಸುತ್ತಾರೆ. ಭಾಷಾನುವಾದದ ಕುರಿತು ಮಾಹಿತಿಯೋಗ್ಯ ಬರಹ. ಇಲ್ಲಿನ ಬಹುತೇಕ ಬರಹಗಳು ಎಲ್ಲರ ಬದುಕಿನಲ್ಲಿ ನಿತ್ಯವೂ ನೋಡಲು ಸಿಗುವ ವಿಷಯಗಳೇ ಆಗಿವೆ. ಹೀಗಾಗಿ ಬಹಳ ಬೇಗ ಮನಸ್ಸಿಗೆ ತಲುಪುತ್ತವೆ. ಬದಲಿ ವ್ಯವಸ್ಥೆ' ಎಂಬ ಲೇಖನ ನಾವು ಹೇಗೆ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತೇವೆ ಎಂಬುದನ್ನು ವಿವರಿಸುತ್ತದೆ. ಗಟ್ಟಿಯಾದ ವಿವರಣೆಗಳೊಂದಿಗೆ, ಉದಾಹರಣೆಗಳೊಂದಿಗೆ ಲಘು ದಾಟಿಯ ಬರಹಗಳು ಇಲ್ಲಿವೆ. ಜಗತ್ತಿನಲ್ಲಿ ನಿತ್ಯವೂ ನಡೆಯುವ ನೂರೆಂಟು ಸಭೆ, ಸಮಾರಂಭಗಳು, ಅನುಕೂಲಕ್ಕೆ ತಕ್ಕಂತೆ ಅವುಗಳಲ್ಲಿನ ಮಾಪಾರ್ಡುಗಳು, ಸಭೆಗೆ ಇರಬೇಕಾದ ಗೌರವಗಳ ಕುರಿತು ವಿವರಿಸುವ ಸಭಾ ಮರ್ಯಾದೆ' ಲೇಖನ ಸಭೆಗಳ ಕುರಿತಾಗಿನ ಒಳನೋಟವನ್ನು ನೀಡುತ್ತದೆ.
©2024 Book Brahma Private Limited.