‘ಪ್ರಾಣೇಶ್ ಪ್ರಪಂಚ’ ಹೆಸರೇ ಸೂಚಿಸುವಂತೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಪ್ರಬಂಧಗಳ ಸಂಕಲನ. ಹಾಸ್ಯ ಚಟಾಕಿಗಳನ್ನು ಸಿಡಿಸುತ್ತಾ ಕನ್ನಡದ ಮನೆ-ಮನಗಳಲ್ಲಿ ಹೆಸರುವಾಸಿಯಾಗಿರುವ ಗಂಗಾವತಿ ಪ್ರಾಣೇಶ್, ನಗಿಸುತ್ತಾ, ನಗುವಿನ ಮೂಲಕವೇ ಬದುಕಿನಲ್ಲಿ ಪಾಲಿಸಬೇಕಾದ ಆಚಾರ-ವಿಚಾರಗಳನ್ನು ಹೇಳಿ, ಅರಿವು ಮೂಡಿಸುವುದು ಅವರ ಕಾಳಜಿ.
ಪ್ರಾಣೇಶ್ ಅವರದ್ದು ಎರವಲು ಹಾಸ್ಯವಲ್ಲ. ನಮ್ಮ ನಡುವಿನ ಸಹಜ ಘಟನೆ- ಪ್ರಸಂಗಗಳಲ್ಲಿ ಅವರು ಹಾಸ್ಯವನ್ನು ಕಾಣುತ್ತಾರೆ. ಅದನ್ನು ಅಷ್ಟೇ ಸಹಜವಾಗಿ ಪ್ರಸ್ತುತಪಡಿಸುತ್ತಾರೆ. ನಗಿಸುವವನಿಗೆ ಆಂಗಿಕ ಭಾಷೆಯಷ್ಟೇ, ನುಡಿಗಟ್ಟು, ಸಹಜತೆ, ಪ್ರಾದೇಶಿಕತೆ ಹಾಗೂ ಸಮಯಪಾನೆ ಬಹಳ ಮುಖ್ಯ. ಪ್ರಾಣೇಶ್ ಈ ಎಲ್ಲ ಸಂಗತಿಗಳನ್ನು ಸಲೀಸಾಗಿ ಮೈಗೂಡಿಸಿಕೊಂಡಿದ್ದಾರೆ. ಎಂಥ ಪ್ರಸಂಗಕ್ಕೂ ಖಾಸಗಿತನ ಹಾಗೂ ವೈಯಕ್ತಿಕ ಸ್ಪರ್ಶವನ್ನು ಕೊಟ್ಟು ಆಪ್ತವಾಗಿಸುತ್ತಾರೆ. ಇಂಥ ಹಾಸ್ಯ ಕಲಾವಿದ ಅಂಕಣ ಬರೆದರೆ ಹೇಗಿರುತ್ತದೆ ಎಂಬುದನ್ನು ಈ ಕೃತಿಯ ಮೂಲಕ ಕಾಣಬಹುದು.
©2024 Book Brahma Private Limited.