‘ನಾ ಕಂಡಂತೆ ತೇಜಸ್ವಿ-ಶಾಮಣ್ಣ’ ಕಡಿದಾಳ್ ಪ್ರಕಾಶ್ ಅವರ ಕೃತಿಯಾಗಿದೆ. ಆತ್ಮಚರಿತ್ರೆ ಜೀವನಚರಿತ್ರೆ ಅನುಭವಕಥನಗಳಂತೆಯೇ ನೆನಪುಗಳ ಕಥನವೂ ಪ್ರಬಂಧ ಸಾಹಿತ್ಯಕ್ಕೆ ಸೇರುವ ಪ್ರಕಾರ. ಇಂಥ ಸ್ಮೃತಿ ಕಥನಕ್ಕೆ ಬೇಕಾದ್ದು ಮೊದಲಿಗೆ ಜೀವನಾನುಭವ, ನಂತರ ನೆನಪಿನ ಶಕ್ತಿ ಮತ್ತು ನಿರೂಪಣೆಯ ಕಲೆ. ಕಡಿದಾಳ್ ಪ್ರಕಾಶ್ ಅವರಿಗೆ ತಾನೊಬ್ಬ ಸಾಹಿತಿ ಎಂಬ ಭ್ರಮೆಯೇ ಇಲ್ಲ. ತೇಜಸ್ವಿ ಮರಣದ ಸಂದರ್ಭದಲ್ಲಿ ಜನರಾಡುವ ಮಾತುಗಳನ್ನು ಕೇಳಿ ಕೇಳಿ, ತಾನೂ ಕೂಡಾ ಹೀಗೇ ಹೇಳಬಲ್ಲೆ ಎನಿಸಿ ಬರೆಯಲು ಕುಳಿತವರು. ಸೋಂಕುಮಾರಿ ಕೋವಿಡ್ಗೆ ಒಳಗಾದಾಗ ಒದಗಿಬಂದ ರೂಮ್ ಕ್ವಾರಂಟೈನ್ ಪರಿಸ್ಥಿತಿ ಬರಹಕ್ಕೆ ಇಂಬು ಕೊಟ್ಟಿತು. ಕೆಂಡದ ಜೊತೆಗೂಡಿದ ಇದ್ದಿಲು ಕೂಡಾ ಕೆಂಡವಾಗಿ ಪರಿವರ್ತನೆಗೊಳ್ಳುವಂತೆ ಪ್ರಕಾಶ್ ಅವರು ಆತ್ಮೀಯ ಬಂಧು ತೇಜಸ್ವಿ ಮತ್ತು ಅಣ್ಣ ಶಾಮಣ್ಣನವರ ನೆನಪುಗಳನ್ನು, ಗುಡ್ಡಗಾಡಿನಲ್ಲಿ ಪೊರಕೆ ಕಡ್ಡಿಗಳನ್ನು ಆಯ್ದುಕೊಂಡು ಹೂಮುಳ್ಳುಗಳನ್ನು ಉದುರಿಸಿ ಗಿರಿಜನರು 'ಕಸಪೊರಕೆ' ಕಟ್ಟುವಂತೆ ನಮಗೆ ಸ್ಮೃತಿ ಕಥನಗಳನ್ನು ಕಟ್ಟಿ ಕೊಟ್ಟಿದ್ದಾರೆ: ಈಗಾಗಲೇ ಪ್ರಕಟವಾಗಿರುವ 'ಕಟ್ಟುವ ಹಾದಿಯಲ್ಲಿ' ಎಂಬ ಕೃತಿಯಲ್ಲಿ ಇದರ ಅವತಾರವನ್ನು ಗಮನಿಸಬಹುದು. ಪ್ರಸ್ತುತ ನನ್ನ ಕೈಯಲ್ಲಿರುವ 'ನಾನು ಕಂಡಂತೆ ತೇಜಸ್ವಿ – ಶಾಮಣ್ಣ' ಎಂಬ ಕೃತಿ ಎರಡನೇ ಫಲವಾಗಿದೆ ಎನ್ನುತ್ತಾರೆ ವಿ. ಚಂದ್ರಶೇಖರ ನಂಗಲಿ.
©2024 Book Brahma Private Limited.