ಕನ್ನಡ ಲೇಖಕ, ಅನುವಾದಕರಾದ ಚಿದಾನಂದ ಸಾಲಿಯವರು ಸಾಹಿತ್ಯ, ವೈದ್ಯಕೀಯ, ಇತಿಹಾಸ, ಗತಾನುಭವ, ಸೂಕ್ತಿ ಸಂಗ್ರಹ ಮುಂತಾದ ಅನೇಕ ವಿಷಯಗಳನ್ನು ಕುರಿತಾದ ಪ್ರಬಂಧ ಲೇಖನಗಳನ್ನುಈ ಪುಸ್ತಕದಲ್ಲಿ ರಚಿಸಿದ್ದಾರೆ. ಪ್ರಕೃತಿ ಮೀಮಾಂಸೆ ಅದರ ಎಲ್ಲಾ ಆಯಾಮಗಳನ್ನು, ಮತ್ತು ಭಾರತೀಯ ಸಮಾಜಶಾಸ್ತ್ರಕ್ಕೆ ಸೇರಿಸಬಹುದಾದ ಅಂಶಗಳನ್ನು, ಜಾತಿವಿವಾದಗಳು, ಜಾತಿಸೂತಕದ ಅಂಶಗಳು, ಇವೆಲ್ಲವೂ ಸಮಾಜ ಧೋರಣೆಯ ಬಗ್ಗೆ ಮಾಹಿತಿಪೂರ್ಣವಾಗಿಯೂ, ಅಷ್ಟೇ ಸ್ವಾರಸ್ಯದಾಯಕವಾಗಿಯೂ ಸಾಲಿಯವರ ’ಮೂರನೇ ಕಣ್ಣು’ ಪುಸ್ತಕದಲ್ಲಿ ಕಾಣಬಹುದು. ಲೇಖಕರೇ ಹೇಳುವಂತೆ ಇಲ್ಲಿಯ ಪ್ರತಿ ಪ್ರಬಂಧವು ತಮ್ಮನ್ನು ನಿರಾಳವಾಗಿಸಿದೆ. ಸಣ್ಣ ಕತೆ ಬರೆದಷ್ಟೇ ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಖ್ಯಾತ ಲೇಖಕ ನಾಗೇಶ ಹೆಗಡೆ ಕೃತಿಯ ಮುನ್ನುಡಿಯಲ್ಲಿ ’ಐದೋ-ಆರೋ ಮಾಸ್ಟರ್ ಡಿಗ್ರಿಗಳನ್ನು ಅದಕ್ಕೂ ಹೆಚ್ಚು ಪುರಸ್ಕಾರ-ಪ್ರಶಸ್ತಿಗಳನ್ನೂ, ಅವೆಲ್ಲಕ್ಕಿಂತ ಹೆಚ್ಚು ಸಾಹಿತ್ಯ ಕೃತಿಗಳನ್ನು ಗರಿಗಳಂತೆ ಹಗುರವಾಗಿ ಧರಿಸಿದ ಈ ಯುವ ಸಾಹಿತಿಗೆ ಹೊಗಳಿಕೆಯ ಭಾರ ಯಾಕೆ ಹೊರಿಸೋಣ ಹೇಳಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.