ಕಪ್ಪು ಹುಡುಗಿ

Author : ಸಂಗೀತಾ ರವಿರಾಜ್

Pages 104

₹ 75.00




Year of Publication: 2015
Published by: ವಾಚಸ್ಪತಿ ಪ್ರಕಾಶನ
Address: #658, 2ನೇಹಂತ, 4ನೇ ಮುಖ್ಯ ರಸ್ತೆ, 4ನೇ ಕ್ರಾಸ್, ಇ ಆಂಡ್ ಎಫ್ ಬ್ಲಾಕ್, 2ನೇ ಹಂತ, ರಾಮಕೃಷ್ಣನಗರ ಮೈಸೂರು
Phone: 9731641886

Synopsys

‘ಕಪ್ಪು ಹುಡುಗಿ’ ಕೃತಿಯು ಸಂಗೀತಾ ರವಿರಾಜ್ ಅವರ ಪ್ರಬಂಧಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ’ಒಂದು ನಿರ್ದಿಷ್ಠ ಕೇಂದ್ರಕ್ಕೆ ನಿಷ್ಠರಾಗುತ್ತಲೇ ಆಆ ಕೇಂದ್ರದ ಸುತ್ತ ಲಲಿತವಾಗಿ ಹರಡಿಕೊಳ್ಳುವುದು ಪ್ರಬಂಧದ ಸಹಜ ಗುಣ. ಈ ಅರ್ಥದಲ್ಲಿ ಅದು ಕವಿತೆ ಮತ್ತು ಕತೆಯ ನಡುವೆ ನಿಂತುಕೊ‌ಳ್ಳುತ್ತದೆ. ಇವೆರಡರ ನಡುವಿನ ನೆಲೆಯಲ್ಲಿ ಇಲ್ಲಿನ ಪ್ರಬಂಧಗಳು ವಿಶಿಷ್ಟವಾಗಿ ಮೂಡಿಬಂದಿವೆ. ಇಲ್ಲಿನ ಪ್ರಬಂಧಗಳಲ್ಲಿ ಮಹಿಳೆ ಮಾತ್ರವೇ ಗೊತ್ತಿರುವ ಕೌಟುಂಬಿಕ ಲೋಕದ ಹಲವು ಸೂಕ್ಷ್ಮಗಳು ಸಶಕ್ತವಾಗಿ ಅನಾವರಣಗೊಂಡಿವೆ. ಬದುಕಿನ ಬೆರಗುಗಳನ್ನು ಹಾಗೆಯೆ ರಕ್ಷಿಸಿ ಅದನ್ನು ಅಕ್ಷರದಲ್ಲಿ ರೂಪಿಸಿದ ಕುಶಲತೆ ಇಲ್ಲಿರುವ ಪ್ರಬಂಧಗಳನ್ನು ಲಲಿತ ಪ್ರಬಂಧಗಳಿಗೆ ಬೇಕಾದ ವಸ್ತು, ಭಾಷೆ ಮತ್ತು ಶೈಲಿ ಸಂಗೀತಾ ಅವರಿಗೆ ಸಿದ್ದಿಸಿದೆಯಾದ್ದರಿಂದ ಇಲ್ಲಿನ ಪ್ರಬಂಧಗಳನ್ನು ಖುಷಿಯಿಂದ ಓದಿಕೊಳ್ಳಬಹುದು’ ಎನ್ನುತ್ತಾರೆ ಪುರುಷೋತ್ತಮ ಬಿಳಿಮಲೆ.

About the Author

ಸಂಗೀತಾ ರವಿರಾಜ್

ಕವಯಿತ್ರಿ ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಅವರು ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರೆ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿರುತ್ತಾರೆ. ಪ್ರಶಸ್ತಿ: ‘ಕಪ್ಪು ಹುಡುಗಿ” ಕೃತಿಗೆ 2018ರ ಕೊಡಗಿನ ಗೌರವ ಪ್ರಶಸ್ತಿ. ಕೃತಿಗಳು: ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ...

READ MORE

Related Books