ಲೇಖಕರು ಪ್ರವಾಹದ ವಿರುದ್ಧ ಹೋರಾಡುವ ಮೀನುಗಳಂತೆ, ಸೆಳವಿಗೆ ಸಿಕ್ಕಿಯೂ ಹಲ್ಲು ಕಚ್ಚಿಕೊಂಡು ಕಾಲಪ್ರವಾಹದಲ್ಲಿ ಎದುರೀಜುತ್ತಾ ಬಾಲ್ಯ, ಯೌವನ,ನವಜೋಡಿಯ ನವಜೀವನದ, ಸಿಹಿ-ಕಹಿ ನೆನಪುಗಳ ಹೊಂಡಕ್ಕೆ ಜಾರಿಬಿಡುತ್ತಾರೆ.
ತಾವು ಕಂಡು ಅರಿತುಕೊಂಡು ಬಂದ ಲೋಕವೊಂದನ್ನು ತಮಗೆ ತಿಳಿದಂತೆ ಅನಾವರಣಗೊಳಿಸುತ್ತಾರೆ. ಇವು ಕೇವಲ ಸವಿನೆನಪುಗಳ, ಹಳೆಯ ಕಾಲದ ಹಳವಂಡಗಳಾದರೆ ಪ್ರಯೋಜನವಿಲ್ಲ. ಈ ಸದ್ಯದ ವರ್ತಮಾನ ಮತ್ತು ಜೀವನ ಭವಿಷ್ಯದ ಜೊತೆ ಜೊತೆಗೆ ಗುದ್ದಾಡುತ್ತಾ ಇವರು ಗತಕಾಲದ ವಿವರಗಳ ಸಂಘರ್ಷವನ್ನು ಸೃಷ್ಟಿಸುವುದರಲ್ಲೇ ಯಶಸ್ಸು ಅಡಗಿದೆ ಎಂಬುವುದನ್ನು ತಿಳಿಸುತ್ತದೆ. ಈ ದೃಷ್ಟಿಯಿಂದ ಸಿದ್ಧರಾಮ ಹೊನ್ಕಲ್ ಅವರ 'ಎಲ್ಲಾ ಮರೆತಿರುವಾಗ' ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ನೋಡಬಹುದು ಹೊನ್ಕಲ್ ಅವರು ಮನುಷ್ಯಕೇಂದ್ರಿತ ದೃಷ್ಟಿಯಿಂದ ಸಕಲಜೀವಜಾಲಕೇಂದ್ರಿತ ದೃಷ್ಟಿಗೆ ಹೊರಳಿಕೊಳ್ಳಬೇಕಾದ ಅಗತ್ಯವಿದೆ. ಸಸ್ಯಪರಿಸರ ಮತ್ತು ಪ್ರಾಣಿ ಪರಿಸರದ ಕುರಿತಾದ ಸೋದರಸ್ನೇಹದ ಕೊರತೆಯು ಇವರ ಪ್ರಬಂಧಗಳಲ್ಲಿದೆ.
©2024 Book Brahma Private Limited.