ಅಭಿವೃದ್ಧಿಗಾಗಿ ಸಿನೆಮಾ-ಕೃತಿಯು ಚಲನಚಿತ್ರ ಕುರಿತಂತೆ ನಾಟಕಕಾರ ಕೆ.ವಿ. ಸುಬ್ಬಣ್ಣ ಬರೆದ ಕಿರು ಪುಸ್ತಿಕೆ. 1978ರಲ್ಲಿ ಒಂದು ವಿಚಾರ ಸಂಕಿರಣದಲ್ಲಿ ಮಂಡಿಸಿದ ವಿಚಾರಗಳನ್ನು ಕೃತಿಯಾಗಿಸಿದೆ. ಕೃತಿಯ ಬೆನ್ನುಡಿಯ ಬರೆಹದಲ್ಲಿ ‘ನಮಗೆ ಸ್ವಾತಂತ್ಯ್ರ ಬಂದಾಗಿನಿಂದ ಈ ದೇಶದ ಅಭಿವೃದ್ಧಿ ಪ್ರಯತ್ನಗಳು ನಡೆದಿವೆ. ಅಭಿವೃದ್ಧಿ ಸಾಧಿಸಲಿಕ್ಕಾಗಿ ಸಿನೆಮಾದಂತಹ ಪ್ರಬಲ ಮಾಧ್ಯಮಗಳನ್ನು ವಿಸ್ತಾರವಾಗಿ ಬಳಸಿಕೊಳ್ಳಬೇಕು ಎನ್ನುವಂತಹ ಪ್ರಯತ್ನ ನಡೆದಿದೆ. ಆದರೆ, 30-35 ವರ್ಷ ಕಳೆದಿದ್ದರೂ ದೊರಕಿರುವ ಫಲ ನಿರಾಶಾದಾಯಕ. ಇದಕ್ಕೆ ಕಾರಣ, ಅಭಿವೃದ್ಧಿಯನ್ನು ಕುರಿತ ನಮ್ಮ ಕಲ್ಪನೆಯಲ್ಲೇ ದೋಷವಿದೆ. ಮತ್ತು ಸಿನೆಮಾವನ್ನು ಕುರಿತ ಕಲ್ಪನೆಯಲ್ಲೇ ದೋಷವಿದೆ’ ಎಂದು ಗಮನ ಸೆಳೆಯಲಾಗಿದೆ. ಇಂತಹ ವಿಚಾರಗಳನ್ನು ಪ್ರತಿಪಾದಿಸುವ ಕೃತಿ ಇದಾಗಿದೆ.
©2024 Book Brahma Private Limited.