ಪ್ರಬಂಧ 2011

Author : ರಾಜಶೇಖರ ಜಮದಂಡಿ

Pages 162

₹ 70.00




Year of Publication: 2011
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು
Phone: 08022211730

Synopsys

ಸಮಕಾಲೀನ ವಸ್ತು ವಿಷಯಗಳ ಕುರಿತು ರಚಿಸಲಾಗಿರುವ ಪ್ರಬಂಧಗಳ ಸಂಕಲನ-ಪ್ರಬಂಧ-2011. ವಿವಿಧ ಲೇಖಕರ ಪ್ರಬಂಧಗಳು ಇಲ್ಲಿದ್ದು, ನಿವೃತ್ತಿಯ ಮೋಜು, ಮೊದಲೇ ಹೇಳಿಬಿಡುವ ಹಂಬಲದಲ್ಲಿ, ನೆನಪಿನ ಸೈಕಲ್ಲುಗಳಲ್ಲಿ ತಿರುಗಿದಾಗ, ಬಿಡುಗೇಶಿ ಬೆಡಗಿಯರು, ಕನ್ನಡಾಯಣ, ಭಾನುವಾರದ ಪ್ರೀತಿ, ಫಾರಿನ್ ಪುಲಕ, ಶಾಪ, ಹಣ ದ್ವಿಗುಣದ ಅವಾಂತರಗಳು, ಈರುಳ್ಳಿಗೂ ಒಂದು ಕಾಲ, ಕನ್ನಡ ಎನೆ ನಡುಗುವುದೆನ್ನದೆ!, ನಿದ್ರೆ, ಒರಿನ ಅಳಲು, ಸುದ್ದಿಯ ಹಿಂದಿನ ಸ್ವಾರಸ್ಯಗಳು, ರುಕ್ಮಿಣಿಯ ಕೊರಳ ಮುತ್ತಿನ ಸರ, ಒಂದು ಈರುಳ್ಳಿ ವರದಿ, ಮಧು ಸಂಸ್ಕೃತಿ, ಪಾರೂನ ಪರಾಕ್ರಮ ಪತಿಗೆ ಲಕ್ಷ್ಮಣರೇಖೆ, ಕಣ್ಣೀರು ಕೌದಿ ತೊಯ್ಯಿಸಿದವು, ಮದುವೆಯ ಕರೆಯ, ರೇಡಿಯೋ ಭೇಟಿಯಲ್ಲಿ, ಚೌತಿ ಗುಗ್ಗರಿಯ ಪರಿಪರಿ, ನನ್ನ ಧಾರವಾಹಿಯ ವ್ಯಸನ, ಕಾಲದಂಗಡಿಯ ಮುಂದೆ ಹೊಸ ವರ್ಷ, ಬೇಜಾರು, ದೀಪಾವಳಿ ಹಾವಳಿ, ಕೋಟಿ ಆಸೆ, ಬಯಲು ಆಲಯದೊಳಗೆ, ನನ್ನೊಲುಮೆಯ ಕಿಟಕಿ, ಬಹುಮಾನ ಬರಬೇಕಾ ಮುಂತಾದ ಪ್ರಬಂಧಗಳು ಕೃತಿಯಲ್ಲಿವೆ. 

About the Author

ರಾಜಶೇಖರ ಜಮದಂಡಿ
(30 July 1969)

ಡಾ. ರಾಜಶೇಖರ ಜಮದಂಡಿ ಮೂಲತಃ ಹೊಸಪೇಟೆಯವರು. 30-07-1969 ರಂದು ಜನನ. ತಂದೆ ದಿ: ಜೆ. ಬಸವರಾಜ ತಾಯಿ ಜೆ. ಅನ್ನಪೂರ್ಣಮ್ಮ. ಗುಲಬರ್ಗಾ ವಿ.ವಿ.ಯಿಂದ ಎಂ.ಎ. (1994) ಹಾಗೂ ಕನ್ನಡ ವಿ.ವಿ.ಯಿಂದ ಜಾನಪದ ವಿಷಯವಾಗಿ (1997) ಎಂ.ಫಿಲ್ ಹಾಗೂ  ಪಿಎಚ್ ಡಿ (2002) ಪಡೆದಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಜನಪದ ಕಲಿಕಾ ಕೇಂದ್ರದಲ್ಲಿ ವಿವಿಧ ಸೇವೆ, ಬಳ್ಳಾರಿ ಶ್ರೀಕೃಷ್ಣದೇವರಾಯ (2017-18) ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕೊಪ್ಪಳದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ, ಮೈಸೂರಿನ (2018) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸಹ ಸಂಶೋಧಕರಾಗಿದ್ದರು. ಕೃತಿಗಳು: ಅಂಗಳ(ಕವನ ಸಂಕಲನ), ಸರ್ವಜ್ಞನ ವಚನಗಳು ಒಂದು ಜಾನಪದೀಯ ಅಧ್ಯಯನ (ಪಿ.ಹೆಚ್‍ಡಿ ಮಹಾಪ್ರಬಂಧ) , ಚಿಂತನಾಂಜಲಿ(ಚಿಂತನ ಲೇಖನಗಳು), ಸಮರ್ಪಣೆ (ಸಹೋದರನೊಂದಿಗೆ)  (ಭಕ್ತಿಗೀತೆಗಳು), ನಿಸ್ಸೀಮ ...

READ MORE

Related Books