ಡಾ. ರಾಜಶೇಖರ ಜಮದಂಡಿ ಮೂಲತಃ ಹೊಸಪೇಟೆಯವರು. 30-07-1969 ರಂದು ಜನನ. ತಂದೆ ದಿ: ಜೆ. ಬಸವರಾಜ ತಾಯಿ ಜೆ. ಅನ್ನಪೂರ್ಣಮ್ಮ. ಗುಲಬರ್ಗಾ ವಿ.ವಿ.ಯಿಂದ ಎಂ.ಎ. (1994) ಹಾಗೂ ಕನ್ನಡ ವಿ.ವಿ.ಯಿಂದ ಜಾನಪದ ವಿಷಯವಾಗಿ (1997) ಎಂ.ಫಿಲ್ ಹಾಗೂ ಪಿಎಚ್ ಡಿ (2002) ಪಡೆದಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಜನಪದ ಕಲಿಕಾ ಕೇಂದ್ರದಲ್ಲಿ ವಿವಿಧ ಸೇವೆ, ಬಳ್ಳಾರಿ ಶ್ರೀಕೃಷ್ಣದೇವರಾಯ (2017-18) ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕೊಪ್ಪಳದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ, ಮೈಸೂರಿನ (2018) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸಹ ಸಂಶೋಧಕರಾಗಿದ್ದರು.
ಕೃತಿಗಳು: ಅಂಗಳ(ಕವನ ಸಂಕಲನ), ಸರ್ವಜ್ಞನ ವಚನಗಳು ಒಂದು ಜಾನಪದೀಯ ಅಧ್ಯಯನ (ಪಿ.ಹೆಚ್‍ಡಿ ಮಹಾಪ್ರಬಂಧ) , ಚಿಂತನಾಂಜಲಿ(ಚಿಂತನ ಲೇಖನಗಳು), ಸಮರ್ಪಣೆ (ಸಹೋದರನೊಂದಿಗೆ) (ಭಕ್ತಿಗೀತೆಗಳು), ನಿಸ್ಸೀಮ ಪಥ (ಸಂಪಾದನೆ: ಸಹೋದರನೊಂದಿಗೆ) (ವಚನಗಳ ಲೇಖನಗಳು), ವಚನ ಪರಿಮಳ (ಬಸವಗುರುಕಾರುಣ್ಯ ಪ್ರಶಸ್ತಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್ಲ; ವಚನಗಳ ಲೇಖನಗಳು), ವಚನ ಸಾಹಿತ್ಯದಲ್ಲಿ ಪ್ರತಿಭಟನೆ (ವಚನಸಾಹಿತ್ಯ ಕುರಿತು), ವಿವೇಕಾಂಜಲಿ (ಚಿಂತನ ಲೇಖನಗಳು), ಕಿರಣ-ಹೊಂಗಿರಣ (ಶ್ರೀಮತಿಯೊಂದಿಗೆ; ಚಿಂತನಲೇಖನಗಳು), ಜಾನಪದ ವಿಚಾರಗಳ ಸಂಗಮ (ರಾಷ್ಟ್ರೀಯ ವಿಶ್ವೇಶ್ವರಯ್ಯ ಪ್ರಶಸ್ತಿ - ಬೆಂಗಳೂರು. 2014ರಲ್ಲಿ; ಜಾನಪದಕ್ಕೆ ಸಂಬಂಧ ಲೇಖನಗಳು), ದೇವನೂರು ಗುರುಮಲ್ಲೇಶ್ವರ (ಜೀವನ ಚರಿತ್ರೆ), ಪುನರುತ್ಥಾನ (ವೈವಿಧ್ಯಮಯ ಲೇಖನಗಳು), ಮೋಳಿಗಿ ಮಾರಯ್ಯನ ವಚನ ದೀಪಿಕೆ (ವಚನಗಳ ಟೀಕು), ವಚನಗಳಲ್ಲಿ ದೃಷ್ಠಾಂತಗಳು , ವಚನಾವಲೋಕನ (ವಚನಗಳಿಗೆ ಸಂಬಂಧ ಲೇಖನಗಳು), ಬಸವಾಂತರಂಗ (ಬಸವಣ್ಣನವರ ಕುರಿತ ಲೇಖನಗಳು), ಶಾಹೀನ್ (ಡಾ.ಅಬ್ದುಲ್ ಖದೀರ್ ಅವರ ಅಭಿನಂದನಾಗ್ರಂಥ. ಸಹ ಸಂಪಾದಕ), ಚಿರಂತನ ಸತ್ಯ (ಶ್ರೀಮತಿಯೊಂದಿಗೆ; ಚಿಂತನ ಲೇಖನಗಳು), ಅಲ್ಲಲ್ಲಿ ಬರೆದದ್ದು..(ವೈವಿದ್ಯಮಯ ಲೇಖನಗಳು), ವಿನೋದ ಪ್ರಬಂಧ 2011 (ಕರ್ನಾಟಕ ಸಾಹಿತ್ಯ ಅಕಾಡೆಮಿ ಪಬಂಧಗಳ ಸಂಕಲನ), ಜಾನಪದ ಸಂಪತ್ತು (ಜಾನಪದ ಸಾಹಿತ್ಯದ ಪರಿಚಯ), ಸಂಬಂಧಗಳು ( ಸಂಪಾದನೆ: ವಿವಿಧ ಲೇಖಕರ ಲೇಖನಗಳು), ಲೋಕದಾಗ ಇರೋತನಕ ಬೇಕಾಗಿ ಇರಬೇಕ (ಜಾನಪದ ಸಂಬಂಧ ಲೇಖನಗಳು), ರಸಜ್ಞನ ವಚನಗಳು, ಚಾಮರಾಜನಗರ ಜಿಲ್ಲೆಯ ಜಾತ್ರೆ ಮತ್ತು ಹಬ್ಬಗಳು (ಸಂಶೋಧನಾ ಗ್ರಂಥ), ವಚನಾನುಭವ (ವಚನಸಾಹಿತ್ಯದ ಲೇಖನಗಳು), ಜನಪದ ಗರತಿಯ ಮನೋಭಾವ ಬೀದರ್-ಬಿದರಿ, ಬೀದರ ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳಗಳು, ನಿಲುವುಗನ್ನಡಿ ಇತ್ಯಾದಿ.
ಜವಾಬ್ದಾರಿ ನಿರ್ವಹಣೆ: ಬುದ್ಧ-ಬಸವಣ್ಣ, ಜಾನಪದ, ವಚನ -ಜನಪದ ವಿವಿಧ ವಿಷಯವಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಶಿಬಿರ-ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರಾಗಿ, ಜೀ.ಶಂ.ಪ ಸಾಹಿತ್ಯ ವೇದಿಕೆ (ಮಂಡ್ಯ) ಸದಸ್ಯರು, ಬಳ್ಳಾರಿ ಜಿಲ್ಲಾ ಸಾಹಿತ್ಯ ಪರಿಷತ್ತು ಗೌರವ ಸದಸ್ಯರಾಗಿ, ಕರ್ನಾಟಕ ಜಾನಪದ ಪರಿಷತ್ತು ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಾನುಲಿಯಲ್ಲಿ ಚಿಂತನೆಗಳು ಪ್ರಸಾರವಾಗಿವೆ.
ಪ್ರಶಸ್ತಿ-ಗೌರವಗಳು: ಹೊಸಪೇಟೆಯ ಸಂಗೀತ ಭಾರತಿ ಸಾಂಸ್ಕೃತಿಕ ಸಮಿತಿ ಚಿತ್ತವಾಡಗಿಯಿಂದ ಶ್ರಾವಣೋತ್ಸವ ಪ್ರಶಸ್ತಿ, ಶಂಕರ ಪ್ರಶಸ್ತಿ, ಚಿತ್ರದುರ್ಗದ ಶ್ರೀ ಮುರುಘಾಮಠದ ಬಸವಕೇಂದ್ರದ ಶಿಕ್ಷಣ ಪ್ರೇಮಿ ಪ್ರಶಸ್ತಿ, ಶಿಕ್ಷಣ ಶ್ರೀ ಪ್ರಶಸ್ತಿ,
2009ರಲ್ಲಿಇಳಕಲ್ಲನ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಬಸವಗುರು ಕಾರುಣ್ಯ ಪ್ರಶಸ್ತಿ (ವಚನ ಪರಿಮಳ-ಕೃತಿಗೆ) , ಚಾಮರಾಜನಗರದ ರಂಗವಾಹಿನಿ ಸಂಸ್ಥೆಯ ಮುಳ್ಳೂರು ನಾಗರಾಜು ಕಾವ್ಯ (2011)ಪ್ರಶಸ್ತಿ, ಹಾರಕೂಡದ ” ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನದಿಂದ ಕಲ್ಯಾಣ ಚನ್ನಶ್ರೀ ಪ್ರಶಸ್ತಿ ಸೇರಿದಂತೆ ಇತರೆ ಗೌರವಗಳು ಸಂದಿವೆ.