ಪತ್ರಕರ್ತ ರಘುನಾಥ್ ಚ. ಹ. ಅವರ 12 ಪ್ರಬಂಧಗಳ ಸಂಕಲನ ‘ರಾಗಿಮುದ್ದೆ’. ಲೇಖಕರು ತಮ್ಮ ಅನುಭವದ ಗೊಂಚಲಿನ ಮಾಗಿದ ಹಣ್ಣಿನ ಸ್ವಾದವನ್ನು ಮಾತ್ರವೇ ಈ ಪ್ರಬಂಧಗಳಲ್ಲಿ ಹೆಕ್ಕಿದ್ದು ನಾಯಿ ನೆರಳು, ರಾಗಿಮುದ್ದೆ, ಅದರಂ ಮಧುರಂ, ಮಳೆಯ ಮೂರು ಹನಿಗಳು, ಹಲ್ಲು ತೊಳೆಸಿಕೊಳ್ಳುತ್ತಾ ಅಮೆಜಾನ್ ಕಾಡುಗಳಲ್ಲಿ , ಸಂಪೂರ್ಣ ರಾಮಾಯಣ ಮುಂತಾವುಗಳ ಪ್ರಬಂಧಗಳನ್ನು ಇಲ್ಲಿ ಕಾಣಬಹುದಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು “ಇಲ್ಲಿನ ಎಲ್ಲಾ ಪ್ರಬಂಧಗಳಲ್ಲಿ ಎದ್ದುಕಾಣುವ ಅಂಶ ಲೇಖಕರ ಪ್ರಾಮಾಣಿಕತೆ, ಸುಂದರ ಶಿಲ್ಪ, ಕಾವ್ಯಾತ್ಮಕ ಭಾಷೆ. ಪ್ರಬಂಧ ಪ್ರಕಾರವನ್ನು ಒಲಿಸಿಕೊಂಡಿರುವ ಪರಿ ನಿಚ್ಚಳವಾಗಿ ಕಾಣುತ್ತದೆ. ಕಥೆ ಮತ್ತು ಪ್ರಬಂಧಗಳ ಮೂಲಕ ಕನ್ನಡ ಓದುಗರ ಮನಸ್ಸನ್ನು ಗೆಲ್ಲುತ್ತಿರುವ ರಘುನಾಥ್ ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಿರುವುದರಲ್ಲಿ ಸಂಶಯವಿಲ್ಲ” ಎಂದಿದ್ದಾರೆ.
©2024 Book Brahma Private Limited.