ಸಂಯುಕ್ತ ಪುಲಿಗಲ್ ಅವರು ಅವಧಿ ಜಾಲತಾಣಕ್ಕೆ ಬರೆದ ಅಂಕಣ ಬರಹಗಳ ಸಂಕಲಿತ ರೂಪ ಲ್ಯಾಪ್‌ಟಾಪ್ ಪರದೆಯಾಚೆಗೆ. ಇದರಲ್ಲಿ ಒಟ್ಟು 22 ಪ್ರಬಂಧಗಳಿವೆ. ದಿನನಿತ್ಯ ನೋಡಿದ, ಅನುಭವಿಸಿದ, ಕಂಡುಂಡ ವಿಷಯಗಳನ್ನೇ ಇಟ್ಟುಕೊಂಡು ಇವರು ಬರೆದಿರುವ ಪ್ರಬಂಧಗಳು ಟಿಪ್ಪಣಿಗಳ ರೂಪದಲ್ಲಿವೆ. ಪ್ರಶ್ನಿಸುವಿಕೆ ಇವರ ಪ್ರಬಂಧಗಳಲ್ಲಿ ಕಂಡುಬರುತ್ತದೆ.
‘ಬೈನರಿ ಜಗತ್ತಿನ ಮಧ್ಯೆ ಇದ್ದೂ ಜಗತ್ತು ಅದಕ್ಕಿಂತ ಭಿನ್ನವಾಗಿ ಕಟ್ಟಲ್ಪಟ್ಟಿದ್ದು ಎನ್ನುವುದನ್ನು ಸಮರ್ಥವಾಗಿ ಈ ಕೃತಿಯಲ್ಲಿ ಮನವರಿಕೆ ಮಾಡಿಸುತ್ತಿದ್ದಾರೆ' ಎನ್ನುವ ಮಾತು ಸಂಯುಕ್ತಾ ಪುಲಿಗಲ್ ಅವರ 'ಲ್ಯಾಪ್‌ಟಾಪ್ ಪರದೆಯಾಚೆಗೆ' ಪುಸ್ತಕದ ಬೆನ್ನುಡಿಯಲ್ಲಿ ಇದೆ. ಈ ಪುಸ್ತಕದಲ್ಲಿ ಇರುವ ಬಿಡಿ ಬರಹಗಳನ್ನು ಓದುತ್ತಿದ್ದರೆ ಈ ಮಾತು, ಪುಸ್ತಕಕ್ಕೆ ಬಹಳ ಸೂಕ್ತ ಎಂಬ ಅನಿಸಿಕೆ ಮೂಡುತ್ತದೆ. 'ಡಾರ್ಕ್ ಅಂಡ್ ಲವೀ ಟೂ...' ಬರಹದಲ್ಲಿ ಮನುಷ್ಯನ ಕಪ್ಪು ಮತ್ತು ಬಿಳಿ ತೊಗಲಿನ ಕುರಿತು ಸಂಯುಕ್ತಾ ಅವರು ದಾಖಲಿಸಿರುವ ಅನುಭವ-ಅನಿಸಿಕೆಗಳು ನೆನಪಿನಲ್ಲಿ ಉಳಿಯುವಂಥವು. ಇಲ್ಲಿನ ಒಂದೆರಡು ಬರಹಗಳು ಚರ್ಚಾರ್ಹ ವಸ್ತುಗಳನ್ನು ಅಯ್ಕೆ ಮಾಡಿಕೊಂಡಿವೆ. ಅವುಗಳಲ್ಲಿ ಲೇಖಕಿ ತಮ್ಮ ಅಭಿಪ್ರಾಯವನ್ನು ಸ್ಪುಟವಾಗಿ ದಾಖಲಿಸಿದ್ದಾರೆ. ಅಲ್ಲಿ ಪಾರಿಭಾಷಿಕದ ರೂಪದಲ್ಲಿ ಬಳಸಿರುವ ಪದಗುಚ್ಛಗಳ ಬಗ್ಗೆ ಪ್ರಶ್ನೆಗಳು ಮೂಡಬಹುದು - ಆದರೆ, ಅಲ್ಲಿ ಲೇಖಕಿ ಹೊಂದಿರುವ ಸದಾಶಯವು ಪ್ರತಿಫಲಿತವಾಗಿದೆ ಎಂಬುದನ್ನೂ ಗುರುತಿಸಬೇಕು. ಅಂದಹಾಗೆ, ಇಲ್ಲಿರುವವು ಸಂಯುಕ್ತಾ ಅವರು ಬ್ಲಾಗಿನಲ್ಲಿ ಬಿಡಿಬಿಡಿಯಾಗಿ ಬರೆದ ಬರಹಗಳು.
ಕೃಪೆ : ಪ್ರಜಾವಾಣಿ (2020 ಮಾರ್ಚಿ 08)
©2024 Book Brahma Private Limited.