ಹೇಗಾದರೂ ಬದುಕು ಒಂದು ವಿಚಾರ ಲಹರಿ. ಇದು ಅಧ್ಯಾತ್ಮಿಕ ಬರಹಗಳ ಸಂಗ್ರಹ. ಆಧ್ಯಾತ್ಮದಲ್ಲಿ ಆಸಕ್ತರಾಗಿರುವ ಪ್ರಾರಂಭಿಕ ಓದುಗರನ್ನು ಮನಸೆಳೆಯುವ ಕೃತಿ. ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಿಯವಾದ ಪುಸ್ತಕವಿದು.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE