ವಿಶಿಷ್ಟ ಶೈಲಿಯಲ್ಲಿರುವ ಪ್ರಬಂಧಗಳ ಸಂಕಲನ ಇದು. ಬದುಕನ್ನು ಒಂದು ಆಪ್ತ ನೆಲೆಯಿಂದ ನೋಡುವ, ಎಲ್ಲವನ್ನೂ ಒಳಗೊಳ್ಳುವ ನಿಲುವಿನಲ್ಲಿ ಜೀವನಪ್ರೀತಿಯನ್ನು ವ್ಯಕ್ತಗೊಳಿಸುವ ಪ್ರಬಂಧಗಳಿವು. ಕಥನದ ಮಾದರಿಯೊಂದು ಈ ಪ್ರಬಂಧಗಳಿಗೆ ಇನ್ನಷ್ಟು ತೀವ್ರತೆಯನ್ನು ಕೊಡುತ್ತದೆ. ಲಘು ನಿರೂಪಣೆಯಲ್ಲೂ ಗಂಭೀರವಾದದ್ದನ್ನು ಹೇಳಬಲ್ಲ ಶಕ್ತಿಯನ್ನೂ ಇಲ್ಲಿ ಕಾಣಬಹುದು. ಬದುಕಿನ ಹೂರಣವನ್ನು ಕಟ್ಟಿಕೊಡುವ, ಮನಸ್ಸನ್ನು ಆರ್ದ್ರಗೊಳಿಸುವ ಒಟ್ಟು ಇಪ್ಪತ್ತು ಪ್ರಬಂಧಗಳು ಇಲ್ಲಿವೆ.
ಕಥೆಗಾರ ಶ್ರೀಹರ್ಷ ಸಾಲಿಮಠ ಮೂಲತಃ ದಾವಣಗೆರೆಯವರು. ಊರಿನಲ್ಲೇ ಪದವಿ ಹಾಗೂ ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ವೃತ್ತಿ ನಿಮಿತ್ತ ಎರಡು ವರ್ಷ ಚೆನೈನಲ್ಲಿದ್ದ ಅವರು ಕನ್ನಡಪ್ರಭದಲ್ಲಿ ವಿಜ್ಞಾನ ಅಂಕಣಕಾರರಾಗಿದ್ದರು. ನಂತರ ಅವರು ಬೆಂಗಳೂರಿನಲ್ಲಿ ಹತ್ತು ವರ್ಷಗಳ ಕಾಲ ಇದ್ದು ಕೆಲಸ ಮಾಡಿದರು. ಸದ್ಯ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಉದಕ ಉರಿದು (ಕಥಾ ಸಂಕಲನ) ...
READ MORE