ಪ್ರಶ್ನಿಸದೇ ಏನನ್ನೂ ಒಪ್ಪದಿರು ಎಂದವರು ವಿಚಾರವಾದಿ, ಶಿಕ್ಷಣತಜ್ಞ ಎಚ್. ನರಸಿಂಹಯ್ಯ. 'ತೆರದ ಮನ' ಅವರ ವಿಚಾರ, ನೆನಪುಗಳು ಹಾಗೂ ಲಲಿತ ಪ್ರಬಂಧಗಳ ಸಂಕಲನ. ವಿಚಾರವಾದಿಗಳ ಬೈಬಲ್ ಎಂದೇ ಕೃತಿ ಪ್ರಸಿದ್ಧವಾಗಿದೆ. ವೈಜ್ಞಾನಿಕ ಮನೋಧರ್ಮ, ಜೀವಪರತೆ, ಜಾತ್ಯತೀತತೆ ಸಮಾಜಸೇವೆಯಂತಹ ಅನೇಕ ಸಂಗತಿಗಳು ಕೃತಿಯಲ್ಲಿವೆ. ನಿಖರತೆ, ನಿಷ್ಠುರತೆಯಿಂದ ವೈಚಾರಿಕತೆಯನ್ನು ಬಿತ್ತುವುದು ಇಲ್ಲಿನ ಲೇಖನಗಳ ಬಹುದೊಡ್ಡ ಗುಣ.
ಕೃತಿಯ ಮತ್ತೊಂದು ಭಾಗದಲ್ಲಿ ಲಲಿತ ಪ್ರಬಂಧ ಹಾಗೂ ಪ್ರವಾಸದ ನೆನಪುಗಳ ಕುರಿತು ಮಾಹಿತಿ ಇದೆ. ಎಚ್ಚೆನ್ ಅತ್ಯಂತ ಗಂಭೀರ ವಿಚಾರಗಳನ್ನೂ ತಿಳಿಹಾಸ್ಯದ ಮೂಲಕ ಹೇಳುತ್ತಿದ್ದರು. ಆ ಹಾಸ್ಯಪ್ರಜ್ಞೆಯನ್ನು ಕೃತಿಯಲ್ಲಿಯೂ ಕಾಣಬಹುದು.
ಎಚ್.ನರಸಿಂಹಯ್ಯನವರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಹಿಂದುಳಿದ ಬಡಕುಟುಂಬದಲ್ಲಿ ಜನಿಸಿದ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿಯೇ ಮುಗಿಸಿದರು. 1935ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಆನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ (ಪ್ರಥಮ) ದರ್ಜೆಯಲ್ಲಿ ಉತ್ತೀರ್ಣರಾದರು. 1946ರಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆಮೇಲೆ ಹನ್ನೆರಡು ವರ್ಷಗಳು ಪ್ರಿನ್ಸಿಪಾಲರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ, ಅವರ ...
READ MORE