ಲೇಖಕ ನವೀನ್ ಸೂರಿಂಜೆ ಅವರ ಕೃತಿ-ನೇತ್ರಾವತಿಯಲ್ಲಿ ನೆತ್ತರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ವಿವಿಧ ಕೋಮುಗಳ ಮಧ್ಯೆ ನಡೆದ ಘರ್ಷಣೆಗಳು, ಅವು ಸಾಮರಸ್ಯದ ಬದುಕಿನ ಮೇಲೆ ಉಂಟು ಮಾಡಿದ ಮರ್ಮಾಘಾತಗಳು, ಅಮಾನವೀಯ ಕೃತ್ಯಗಳು, ಅನಾಗರಿಕರ ವರ್ತನೆಗಳು ಸೌಜನ್ಯ-ಸಭ್ಯತೆ-ಸಂಸ್ಕೃತಿ-ಸಂಸ್ಕಾರಗಳು ಎಂಬ ಪರಿಕಲ್ಪನೆಗಳಿಗೆ ಆರ್ಥವಿಲ್ಲದಂತೆ ಮಾಡಿದ ಘಟನೆಗಳನ್ನು ಲೇಖಕರು ಕೇವಲ ಯಾಂತ್ರಿಕವಾಗಿ ದಾಖಲಿಸಿಲ್ಲ. ಬದಲಾಗಿ, ಇಂತಹ ಕೃತ್ಯಗಳ ಹಿಂದಿನ ಸಂಚುಗಳನ್ನು ಬಯಲಿಗೆಳೆದಿದ್ದಾರೆ. ಪ್ರಜಾಪ್ರಭುತ್ದ ವ್ಯವಸ್ಥೆಯಲ್ಲಿ ಜಾತ್ಯತೀತ ಮನೋಭಾವಕ್ಕೆ ಮಾಡಿದ ಧಕ್ಕೆಯನ್ನು, ಸಂಕುಚಿತ ಮನಸ್ಸಿನ ಕುತಂತ್ರಗಳನ್ನು ಸಹ ದಾಖಲಿಸಿದ್ದಾರೆ. ಸಂಸ್ಕೃತಿಗಳು ನದಿಯ ದಂಡೆಯ ಮೇಲೆ ವಿಕಾಸಗೊಂಡಿವೆ ಎಂದು ಹೇಳಲಾಗುತ್ತದೆ. ಆದರೆ, ನೇತ್ರಾವತಿಯ ನದಿ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಧರ್ಮದ ಹೆಸರಲ್ಲಿ ನೆತ್ತರು ಹರಿದಿರುವ ಕಪ್ಪು- ಅಮಾನವೀಯ ಘಟನೆಗಳ ಸರಮಾಲೆಯಾಗಿ ಇತಿಹಾಸವನ್ನೂ ಈ ಕೃತಿ ದಾಖಲಿಸಿದೆ.
ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಮೂಲತಃ ದಕ್ಷಿಣ ಕನ್ನಡದವರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಷಾ ಕಿರಣ, ಕರಾವಳಿ ಅಲೆ, ಕಸ್ತೂರಿ ನ್ಯೂಸ್ 24@7 ನಲ್ಲಿ ಕೆಲಸ ಮಾಡುತ್ತ. ನಂತರ ಬೆಂಗಳೂರಿಗೆ ಬಂದ ನವೀನ್ ಸೂರಿಂಜೆ ಸಧ್ಯ ಬಿಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಷಾಕಿರಣ ಮತ್ತು ಕರಾವಳಿ ಅಲೆ ಪತ್ರಿಕೆಯ ಸುರತ್ಕಲ್ ವಿಭಾಗದ ಬಿಡಿ ವರದಿಗಾರರಾಗಿ ಕೆಲಸ ಮಾಡಿರುವ ನವೀನ್ ಪರಿಸರ ಪರವಾದ ಸುದ್ದಿಗಳು, ಮಾನವತೆಯ ವಿರುದ್ಧದ ನಿಲುವುಗಳಿರೋ ಸಂಘಟನೆಗಳ ವಿರುದ್ಧದ ಸುದ್ದಿಗಳ ಮೂಲಕ ಸುದ್ದಿಯಾದರು. ಕೋಮುಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್‍ನಲ್ಲಿ ನಡೆದ ಕೋಮುಗಲಭೆಗಳ ಸಚಿತ್ರ ವರದಿ ಮಾಡಿದರು. ...
READ MORE