‘ವಿದ್ಯುತ್ ಕ್ಷೇತ್ರದ ರಾಜಕಾರಣ’ ಕೃತಿಯು ಆರುಂಧತಿ ರಾಯ್ ಅವರ ಮೂಲ ಕೃತಿಯಾಗಿದ್ದು, ಬಿ. ಗಂಗಾಧರ ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೇವಲ ಸರಕಾರಗಳು ಮಾತ್ರ ನಮ್ಮ ದೇಶದ ಶ್ರೀಸಾಮಾನ್ಯನ ಹಣೆಬರಹವನ್ನು ನಿರ್ಧರಿಸುತ್ತಿವೆ. ಅಮೆರಿಕದ ಅಧ್ಯಕ್ಷ ಭಾರತಕ್ಕೆ ಬರುವುದು ಎಂದರೆ ಅವನ ಒಂದೊಂದು ಹೆಜ್ಜೆಯಡಿಯಲ್ಲಿ ನಮ್ಮ ರೈತ ಮಕ್ಕಳು ನಲುಗಿ ಭೂಮಿಗಿಳಿಯುತ್ತಾರೆ. ಆತ ಸಹಿ ಮಾಡಿದಲ್ಲೆಲ್ಲ ನಮ್ಮ ಪಾಲಿಗೆ ಅನಿಷ್ಟವೊಂದು ಕಾದಿರುತ್ತದೆ. ನಮ್ಮ ನದಿಗಳು ಬತ್ತಿಹೋಗುತ್ತವೆ. ಆತನ ಉಸಿರಿನಿಂದ ನಮ್ಮ ವಾತಾವರಣ ಕೆಟ್ಟುಹೋಗಿ, ಅವನು ಕಣ್ಣು ಹಾಯಿಸಿದಲ್ಲೆಲ್ಲ ನಮ್ಮ ನೆಲ ಹೊತ್ತಿ ಉರಿಯುತ್ತದೆ. ಮುಂಬಾಗಿಲಿಗೆ ಬೀಗ ಜಡಿದು ಹಿಂಬಾಗಿಲಿನಿಂದ ಕಳ್ಳಕಾಕರನ್ನು ಮನೆಯೊಳಗೆ ಬಿಟ್ಟುಕೊಳ್ಳುವ ಸರಕಾರ ನಮ್ಮದಾಗಿರುವುದು ನಮ್ಮ ದುರದೃಷ್ಟ.
ನಮ್ಮ ಸೇವಾಕ್ಷೇತ್ರದಲ್ಲಿ ಸಾವಿರಾರು ಹಗರಣಗಳಿದ್ದರೂ ವಿದ್ಯುತ್ ಕ್ಷೇತ್ರದಲ್ಲಿ ನಡೆದ, ಜನದ್ರೋಹಿ ನಿಲುವನ್ನು ತಳೆದು ಅದನ್ನು ಸಾರ್ವಜನಿಕ ಕ್ಷೇತ್ರಕ್ಕೊಪ್ಪಿಸಿದ ಒಂದು ಘಟನೆಯನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ವಿದ್ಯುತ್ತಿಗೆ ಬಹುಬೇಡಿಕೆಯಿರುವ ನಮ್ಮ ದೇಶದಲ್ಲಿ ಅದು ಸಾಮಾನ್ಯ ಜನತೆಗೆ ನಿಲುಕದೆ ಶ್ರೀಮಂತ ಜನತೆ ಮಾತ್ರ ಅದನ್ನು ಅನುಭವಿಸುವಂತಾಯಿತು. ನರ್ಮದಾ ನದಿಗೆ ಬೃಹತ್ ಅಣೆಕಟ್ಟು ಕಟ್ಟಿ ನೀರನ್ನು ಕೃಷಿಗಿಲ್ಲದಂತೆ ಮಾಡಿ, ವಿದ್ಯುತ್ ಉತ್ಪಾದಿಸಿ ಶ್ರೀಮಂತರ ಮನೆ ಬೆಳಗಿಸಿದ ಕಥೆಯನ್ನಿಲ್ಲಿ ಕಾಣಬಹುದಾಗಿದೆ.
(ಹೊಸತು, ಸಪ್ಟೆಂಬರ್ 2012, ಪುಸ್ತಕದ ಪರಿಚಯ)
ಅಭಿವೃದ್ಧಿ ಮತ್ತು ಉದ್ಯೋಗ ನಿರ್ಮಾಣದ ನೆಪಗಳನ್ನು ಮುಂದೊಡ್ಡಿ ಹಿಂಬಾಗಿಲಿನಿಂದ ಪ್ರವೇಶ ಪಡೆಯುವ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ಸರಕಾರದೊಂದಿಗೆ ಅನೇಕಾನೇಕ ಒಪ್ಪಂದಗಳನ್ನು ಮಾಡಿಕೊಂಡಿವೆ. ಕೇವಲ ಸರಕಾರಗಳು ಮಾತ್ರ ನಮ್ಮ ದೇಶದ ಶ್ರೀಸಾಮಾನ್ಯನ ಹಣೆಬರಹವನ್ನು ನಿರ್ಧರಿಸುತ್ತಿವೆ. ಅಮೆರಿಕದ ಅಧ್ಯಕ್ಷ ಭಾರತಕ್ಕೆ ಬರುವುದು ಎಂದರೆ ಅವನ ಒಂದೊಂದು ಹೆಜ್ಜೆಯಡಿಯಲ್ಲಿ ನಮ್ಮ ರೈತ ಮಕ್ಕಳು ನಲುಗಿ ಭೂಮಿಗಿಳಿಯುತ್ತಾರೆ. ಆತ ಸಹಿ ಮಾಡಿದಲ್ಲೆಲ್ಲ ನಮ್ಮ ಪಾಲಿಗೆ ಅನಿಷ್ಟವೊಂದು ಕಾದಿರುತ್ತದೆ. ನಮ್ಮ ನದಿಗಳು ಬತ್ತಿಹೋಗುತ್ತವೆ. ಆತನ ಉಸಿರಿನಿಂದ ನಮ್ಮ ವಾತಾವರಣ ಕೆಟ್ಟುಹೋಗಿ, ಅವನು ಕಣ್ಣು ಹಾಯಿಸಿದಲ್ಲೆಲ್ಲ ನಮ್ಮ ನೆಲ ಹೊತ್ತಿ ಉರಿಯುತ್ತದೆ. ಮುಂಬಾಗಿಲಿಗೆ ಬೀಗ ಜಡಿದು ಹಿಂಬಾಗಿಲಿನಿಂದ ಕಳ್ಳಕಾಕರನ್ನು ಮನೆಯೊಳಗೆ ಬಿಟ್ಟುಕೊಳ್ಳುವ ಸರಕಾರ ನಮ್ಮದಾಗಿರುವುದು ನಮ್ಮ ದುರದೃಷ್ಟ. ನಮ್ಮ ಸೇವಾಕ್ಷೇತ್ರದಲ್ಲಿ ಸಾವಿರಾರು ಹಗರಣಗಳಿದ್ದರೂ ವಿದ್ಯುತ್ ಕ್ಷೇತ್ರದಲ್ಲಿ ನಡೆದ, ಜನದ್ರೋಹಿ ನಿಲುವನ್ನು ತಳೆದು ಅದನ್ನು ಸಾರ್ವಜನಿಕ ಕ್ಷೇತ್ರಕ್ಕೊಪ್ಪಿಸಿದ ಒಂದು ಘಟನೆಯನ್ನಿಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ವಿದ್ಯುತ್ತಿಗೆ ಬಹುಬೇಡಿಕೆಯಿರುವ ನಮ್ಮ ದೇಶದಲ್ಲಿ ಅದು ಸಾಮಾನ್ಯ ಜನತೆಗೆ ನಿಲುಕದೆ ಶ್ರೀಮಂತ ಜನತೆ ಮಾತ್ರ ಅದನ್ನು ಅನುಭವಿಸುವಂತಾಯಿತು. ನರ್ಮದಾ ನದಿಗೆ ಬೃಹತ್ ಅಣೆಕಟ್ಟು ಕಟ್ಟಿ ನೀರನ್ನು ಕೃಷಿಗಿಲ್ಲದಂತೆ ಮಾಡಿ, ವಿದ್ಯುತ್ ಉತ್ಪಾದಿಸಿ ಶ್ರೀಮಂತರ ಮನೆ ಬೆಳಗಿಸಿದ ಕಥೆಯನ್ನಿಲ್ಲಿ ಓದಿನೋಡಿ... ಅತ್ಯಂತ ಕಳಕಳಿಯಿಂದ ಮಾತನಾಡುವ ಅರುಂಧತಿ ರಾಯ್ ಬರೆದ ಲೇಖನದ ಅನುವಾದ.
©2024 Book Brahma Private Limited.