ಲೇಖಕ ಚೇತನ ಸೋಮೇಶ್ವರ ಅವರ ʼಲೋಕ ರೂಢಿಯ ಮೀರಿʼ ಕೃತಿಯು ಚಿಂತಕ ಡಾ. ಎ ಎನ್ ಮೂರ್ತಿರಾಯರ ಸಂಸ್ಕೃತಿಯ ಚಿಂತನೆಗಳ ರೂಪವಾಗಿದೆ. ಎ.ಎನ್. ಮೂರ್ತಿರಾಯರ ಸಂಸ್ಕೃತಿ ಚಿಂತನೆ, ಮೂರ್ತಿರಾಯರ ಸಂಸ್ಕತಿ-ಚಿಂತನೆಯ ನೆಲೆಗಳು, ಜಾತಿ ಕುರಿತ ಚಿಂತನೆಗಳು, ಮತ-ಧರ್ಮ-ಆಧ್ಯಾತ್ಮ ಕುರಿತ ನಿಲುವುಗಳು, ಸ್ವಾತಂತ್ಯ್ರದ ಪರಿಕಲ್ಪನೆ ಹಾಗೂ ಕೇಡಿನ ಪರಿಕಲ್ಪನೆ, ದೇವರು ಕುರಿತ ಚಿಂತನೆ, ಪರಂಪರೆ ಮತ್ತು ಆಧುನಿಕತೆಗಳ ಮುಖಾಮುಖಿ, ಹೆಣ್ಣಿನ ಕುರಿತಾದ ಧೋರಣೆಗಳು, ಭಾಷೆ-ಶಿಕ್ಷಣ ಕುರಿತ ಆಲೋಚನೆಗಳೂ, ಸಾಹಿತ್ಯ ಮತ್ತು ಕಲೆಯ ಬಗೆಗಿನ ಚಿಂತನೆ, ಮಾನವೀಯತೆಯ ಸ್ವರೂಪದ ಚರ್ಚೆ ಹಾಗೂ ಸಮಾರೋಪ ಹೀಗೆ ಒಟ್ಟು 12 ಅಧ್ಯಾಯಗಳ ಮೂಲಕ ಡಾ. ಎ.ಎನ್. ಮೂರ್ತಿರಾಯರ ವ್ಯಕ್ತಿತ್ವದ ಎತ್ತರವನ್ನು ತೋರಲಾಗಿದೆ.
ಲೇಖಕ ಜೋಗಿ ಅವರು ಕೃತಿಗೆ ಮುನ್ನುಡಿ ಬರೆದು ‘ನವೋದಯ ಕಾಲಘಟ್ಟದ ಹಿರಿಯ ಚಿಂತಕ, ಶ್ರೇಷ್ಠ ಬರಹಗಾರರು, ಮಾನವತಾವಾದಿ ಪ್ರೊ.ಎ.ಎನ್ ಮೂರ್ತಿರಾವ್. ವಿಚಾರಶೀಲ ಬರಹಗಾರರು ಹೀಗೆ ಅವರ ವ್ಯಕ್ತಿತ್ವ- ಸಾಧನೆಗಳನ್ನು ಭಿನ್ನವಾಗಿ ವಿಶ್ಲೇಷಿಸಲಾಗಿದೆ. ಒಬ್ಬ ಲೇಖಕನನ್ನು ವಿವಿಧ ಆಯಾಮಗಳಿಂದ ನೋಡುವುದಕ್ಕೆ ಬೇಕಾದ ಮೂಲ ಸಾಮಗ್ರಿಗಳನ್ನು ಲೇಖಕರು ತುಂಬಾ ಜೋಪಾನವಾಗಿ ಸಂಗ್ರಹಿಸಿದ್ದಾರೆ. ಎ.ಎನ್. ಮೂರ್ತಿರಾಯರಿಗೆ ಸಿಕ್ಕಿದ ಅತ್ಯುತ್ತಮ ಮನ್ನಣೆ ಈ ಕೃತಿ’’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಚೇತನ್ ಸೋಮೇಶ್ವರ ಅವರು ತಮ್ವ ಈ ಕೃತಿಯ ಕುರಿತು ‘ ಮೂರ್ತಿರಾಯರ ಬರಹಗಳ ವಿಶ್ಲೇಷಣೆಯೂ ಹೌದು. ಅವರ ಬದುಕಿನ ಚಿತ್ರಣ, ಬದುಕು- ಬರಹಗಳ ಸಮೇತ ಒಬ್ಬ ವ್ಯಕ್ತಿಯನ್ನೂ ಸಮಗ್ರವಾಗಿ ಕಟೆದು ನಿಲ್ಲಿಸುವ ಕೆಲಸವೂ ಆಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. .
©2024 Book Brahma Private Limited.