ಲೇಖಕ ಸುರೇಶ ಭಟ್ ಭಾಕ್ರಬೈಲ್ ಅವರು ಬರೆದ ಕೃತಿ-ಮಂಕು ಬೂ(ಮೋ)ದಿ; ಹಿಟ್ಲರರ ಹೆಜ್ಜೆ ಜಾಡುಗಳು. ಅಭಿವೃದ್ಧಿ ಮಂತ್ರ ಹೇಳುತ್ತಾ ಬಂಡವಾಳಶಾಹಿಗಳೊಂದಿಗೆ ಶಾಮೀಲಾಗಿರುವ ನರೇಂದ್ರ ಮೋದಿ ಅವರ ಮುಖವಾಡ ಬಯಲು ಮಾಡುವ ಕೃತಿ ಇದು. ಬಿಜೆಪಿ ಮತ್ತು ಸಂಘಪರಿವಾರಗಳ ಪ್ರಧಾನಿ ಅಭ್ಯರ್ಥಿಯಾಗಿರುವ ಮೋದಿ ಒಬ್ಬ ಸರ್ವಾಧಿಕಾರಿ. ಫ್ಯಾಸಿಸ್ಟ್ ಮನಸ್ಥಿತಿಯವರು ಎಂಬುದನ್ನು ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
ಮಂಗಳೂರಿನವರಾದ ಸುರೇಶ ಭಟ್ ಬಾಕ್ರಬೈಲ್ ಅವರು ಸುರತ್ಕಲ್ ನ ಕೆ.ಆರ್.ಇ.ಸಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು. ಮುಂಬಯಿಯಲ್ಲಿ ವಾಣಿಜ್ಯ ನೌಕೆ, ನೌಕಾ ನಿರ್ಮಾಣ, ಡೀಸಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು 2006ರಲ್ಲಿ ನಿವೃತ್ತರಾದರು. ನಿವೃತ್ತರಾದ ನಂತರ ಅವರು ಬರಹ ಹಾಗೂ ಮಾನವ ಹಕ್ಕು, ಕೋಮು ಸೌಹಾರ್ದ ಚಳವಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಬರೆಯುವದರ ಜೊತೆಗೆ ಕೋಮುವಾದದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಕೇಸರಿ ಭಯೋತ್ಪಾದನೆ, ಮಂಕು ಬೂ(ಮೋ)ದಿ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಕರ್ಕರೆಯನ್ನು ಕೊಂದವರು ಯಾರು?, ಜೈಲಿನ ...
READ MORE